* ಜಪಾನ್‌ನ ಸ್ಯಾಡೊ ದ್ವೀಪದಲ್ಲಿರುವ ವಿವಾದಾತ್ಮಕ ಚಿನ್ನದ ಗಣಿಯನ್ನು ಸಾಂಸ್ಕೃತಿಕ ಪಾರಂಪರಿಕ ತಾಣವಾಗಿ ನೋಂದಾಯಿಸಲು ಜುಲೈ 29 ರಂದು ಯುನೆಸ್ಕೋ ವಿಶ್ವ ಪಾರಂಪಾರಿಕ ಸಮಿತಿ ನಿರ್ಧರಿಸಿದೆ.* ಉತ್ತರ ಜಪಾನ್‌ನ ನಿಗಾಟಾದ ಕರಾವಳಿಯ ಸ್ಯಾಡೊ ದ್ವೀಪ, ನಾಲ್ಕು ಶತಮಾನಗಳ ಕಾಲ ಕಾರ್ಯನಿರ್ವಹಿಸಿದ್ದು, ವಿಶ್ವದ ಅತಿ ದೊಡ್ಡ ಚಿನ್ನ ಉತ್ಪಾದಕವಾಗಿತ್ತು. 1989ರಲ್ಲಿ ಇದನ್ನು ಮುಚ್ಚಲಾಯಿತು.* ಈ ಗಣಿಯಲ್ಲಿ ಎರಡನೇ ವಿಶ್ವ ಯುದ್ಧದ ವೇಳೆ ಕೊರಿಯಾದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ ಕರಾಳ ಇತಿಹಾಸದ ಚಿತ್ರಣವನ್ನು ಪ್ರದರ್ಶಿಸಲು ಜಪಾನ್ ಒಪ್ಪಿದ ನಂತರ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ. ಜಪಾನ್ ಮತ್ತು ದಕ್ಷಿಣಕೊರಿಯಾ ಮಧ್ಯದ ಸಂಬಂಧಗಳು ಸುಧಾರಣೆಯಾಗಿರುವುದನ್ನು ಈ ಬೆಳವಣಿಗೆ ಸೂಚಿಸುತ್ತದೆ.* ದಿಲ್ಲಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ದಕ್ಷಿಣ ಕೊರಿಯಾ ಪ್ರತಿನಿಧಿ ಒಳಗೊಂಡ ಸಮಿತಿಯ ಸದಸ್ಯರು, ಯುನೆಸ್ಕೊ ಪಟ್ಟಿಗೆ ಸೇರಿಸುವ ನಿರ್ಧಾರಕ್ಕೆ ಸರ್ವಾನುಮತದ ಬೆಂಬಲ ಸಿಕ್ಕಿದೆ ಎಂದು ತಿಳಿಸಿದ್ದಾರೆ.* ಈ ಗಣಿಯನ್ನು ಯುನೆಸ್ಕೊ ಪಾರಂಪಾರಿಕ ಪಟ್ಟಿಗೆ ಸೇರಿಸಲು ಅಗತ್ಯವಿರುವ ಎಲ್ಲ ತಿದ್ದುಪಡಿಗಳನ್ನು ಮಾಡಲಾಗಿದೆ. ಹೆಚ್ಚುವರಿ ಮಾಹಿತಿಯನ್ನು ಜಪಾನ್ ಒದಗಿಸಿದೆ.* ಈ ಗಣಿಗೆ ಸಂಬಂಧಿಸಿ ಯುದ್ಧಕಾಲದ ಇತಿಹಾಸದ ಬಗ್ಗೆ ದಕ್ಷಿಣ ಕೊರಿಯಾದೊಂದಿಗೆ ಸಮಾಲೋಚನೆಯನ್ನು ನಡೆಸಿದೆ ಎಂದು ಯುನೆಸ್ಕೋ ವಿಶ್ವ ಪಾರಂಪಾರಿಕ ಸಮಿತಿ ಸಮಿತಿ ಸದಸ್ಯರು ಹೇಳಿದ್ದಾರೆ.