➤ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸೇವಾ ವಲಯವು (Services Sector) ಮುಂದಿನ ದಶಕದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಲಿದೆ. ಓಮ್ಮಿಸೈನ್ಸ್ ಕ್ಯಾಪಿಟಲ್ (OmniScience Capital) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪ್ರಸ್ತುತ 2.2 ಟ್ರಿಲಿಯನ್ ಡಾಲರ್ ಕೊಡುಗೆ ನೀಡುತ್ತಿರುವ ಸೇವಾ ವಲಯವು 2035ರ ವೇಳೆಗೆ 6 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.➤ ಪ್ರಸ್ತುತ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಶೇ. 55 ರಷ್ಟು ಕೊಡುಗೆ ನೀಡುತ್ತಿರುವ ಸೇವಾ ವಲಯವು, 2035ರ ವೇಳೆಗೆ ಶೇ. 60 ಕ್ಕೆ ಏರಿಕೆಯಾಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ವಲಯವು ಶೇ. 10.6 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ದಾಖಲಿಸಲಿದೆ. 2035ರ ವೇಳೆಗೆ ಭಾರತದ ಒಟ್ಟಾರೆ ಆರ್ಥಿಕತೆಯು 10 ಟ್ರಿಲಿಯನ್ ಡಾಲರ್ ತಲುಪುವ ಗುರಿಯನ್ನು ಹೊಂದಿದೆ.➤ ವಲಯಗಳ ಪಾಲು:1.ಸೇವಾ ವಲಯ (Services): 6 ಟ್ರಿಲಿಯನ್ ಡಾಲರ್ (GDP ಯ ಶೇ. 60 ರಷ್ಟು).2.ಕೈಗಾರಿಕಾ ವಲಯ (Industry): ಪ್ರಸ್ತುತ ಶೇ. 27 ರಿಂದ ಶೇ. 30 ಕ್ಕೆ ಏರಿಕೆಯಾಗಲಿದ್ದು, ಸುಮಾರು 3 ಟ್ರಿಲಿಯನ್ ಡಾಲರ್ ತಲುಪಲಿದೆ.3.ಕೃಷಿ ವಲಯ (Agriculture): ಕೃಷಿ ಮತ್ತು ಸಂಬಂಧಿತ ವಲಯಗಳ ಪಾಲು ಪ್ರಸ್ತುತ ಇರುವ ಶೇ. 18 ರಿಂದ ಶೇ. 10 ಕ್ಕೆ ಇಳಿಕೆಯಾಗುವ ಅಂದಾಜಿದೆ. ➤ ಬೆಳವಣಿಗೆಗೆ ಪ್ರಮುಖ ಕಾರಣಗಳು: ವರದಿಯ ಪ್ರಕಾರ, ಈ ಬೆಳವಣಿಗೆಗೆ ಮಾಹಿತಿ ತಂತ್ರಜ್ಞಾನ (IT) ಮತ್ತು ಹಣಕಾಸು ಸೇವೆಗಳು (Financial Services), ಆಧುನಿಕ ವ್ಯಾಪಾರ ಸೇವೆಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure), ಆರೋಗ್ಯ ಸೇವೆ (Healthcare) ಮತ್ತು ರಿಯಲ್ ಎಸ್ಟೇಟ್, ವೇಗವಾಗಿ ಬೆಳೆಯುತ್ತಿರುವ ದೇಶೀಯ ಬಳಕೆ (Consumption base) ಈ ಅಂಶಗಳು ಇಂಧನವಾಗಲಿವೆ.➤ ಕಳೆದ 10 ವರ್ಷಗಳಲ್ಲಿ ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಶೇ. 11.3 ರಷ್ಟು ಬೆಳವಣಿಗೆಯನ್ನು ಕಂಡಿವೆ. ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಸೇವೆಗಳು ಸಹ ಎರಡಂಕಿಯ ಬೆಳವಣಿಗೆಯನ್ನು ಕಾಯ್ದುಕೊಂಡು ಬಂದಿವೆ.