* ಹುರುನ್ ಸಂಶೋಧನಾ ಸಂಸ್ಥೆಯು ಮಾರ್ಚ್ 26 ರಂದು ಪ್ರಕಟಿಸಿರುವ ವರದಿ 2024 ರ ಪ್ರಕಾರ ಏಷ್ಯಾದಲ್ಲಿಯೇ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿದ ನಗರವೆಂಬ ಹೆಗ್ಗಳಿಕೆಗೆ ಮುಂಬೈ ಭಾಜನವಾಗಿದೆ.  * ಮೊದಲ ಬಾರಿಗೆ, ಮುಂಬೈ ಏಷ್ಯಾದ ಹೊಸ ಬಿಲಿಯನೇರ್ ರಾಜಧಾನಿಯಾಗಿ ಹೊರಹೊಮ್ಮಿದೆ, ಚೀನಾದ ರಾಜಧಾನಿ ಬೀಜಿಂಗ್‌ ಅನ್ನು ಹಿಂದಿಕ್ಕಿದೆ.* ಮುಂಬೈನಲ್ಲಿ 92 ಶತಕೋಟ್ಯಧಿಪತಿಗಳಿದ್ದರೆ (₹8,330 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿರುವವರು), ಬೀಜಿಂಗ್‌ನಲ್ಲಿ 91 ಮಂದಿ ಇದ್ದಾರೆ. ಚೀನಾದಲ್ಲಿ 814 ಶತಕೋಟ್ಯಧಿಪತಿಗಳಿದ್ದರೆ, ಭಾರತ ದಲ್ಲಿ 271 ಮಂದಿ ಇದ್ದಾರೆ ಎಂದು ವರದಿ ವಿವರಿಸಿದೆ.* ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಕಾಲ ಕ್ಕಿಂತಲೂ ಅಸಮಾನತೆ ಪ್ರಮಾಣ ಹೆಚ್ಚಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಪ್ಯಾರಿಸ್ ಮೂಲದ ವಿಶ್ವ ಅಸಮಾನತೆ ಲ್ಯಾಬ್‌ನ ವರದಿ ಹೇಳಿತ್ತು. ಇದರ ಬೆನ್ನಲ್ಲೇ ಈ ಸಿರಿವಂತರ ಪಟ್ಟಿ ಹೊರಬಿದ್ದಿದೆ. ಭಾರತದ ಶತಕೋಟ್ಯಧಿಪತಿಗಳ ಸಂಪತ್ತು ₹83 ಲಕ್ಷ ಕೋಟಿಗೆ ಮುಟ್ಟಿದೆ.* ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರು, ₹9.57 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಭಾರತದ ಸಿರಿವಂತರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. * ಜಾಗತಿಕ ಮಟ್ಟದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 10ನೇ ಸ್ಥಾನ ಪಡೆದಿದ್ದರೆ, ಗೌತಮ್ ಅದಾನಿ 15ನೇ ಸ್ಥಾನದಲ್ಲಿದ್ದಾರೆ. ಟೆಸ್ಲಾ ಕಂಪನಿಯ ಮುಖ್ಯಸ್ಥ ಇಲಾನ್ ಮಸ್ಕ್ ಜಗತ್ತಿನ ಅತಿದೊಡ್ಡ ಶ್ರೀಮಂತರಾಗಿದ್ದಾರೆ.* ಕಳೆದ ವರ್ಷ ಮುಂಬೈನಲ್ಲಿ ಶತಕೋಟ್ಯಧಿಪತಿಗಳ ಪಟ್ಟಿಗೆ ಹೊಸದಾಗಿ 27 ಮಂದಿ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಹೋಲಿಸಿದರೆ ಬೀಜಿಂಗ್‌ನಲ್ಲಿ 6 ಮಂದಿಯಷ್ಟೇ ಸೇರ್ಪಡೆಯಾಗಿದ್ದಾರೆ. ಮುಂಬೈ 'ಸಂಪತ್ತಿನ ಕೇಂದ್ರ' ವೆಂದು ಪ್ರಸಿದ್ದಿ ಪಡೆದಿದೆ ಎಂದು ವರದಿ ತಿಳಿಸಿದೆ.* ಮುಂಬೈನ ನಂಬಲಾಗದ ಆರೋಹಣವನ್ನು "ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2024" ವರದಿಯಲ್ಲಿ ಹೈಲೈಟ್ ಮಾಡಲಾಗಿದೆ, ಈ ನಗರವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬಿಲಿಯನೇರ್ ರಾಜಧಾನಿ ಎಂದು ಹೇಳಿಕೊಂಡಿದೆ* ವಿಶ್ವದ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ನಗರಗಳ ಪಟ್ಟಿನ್ಯೂಯಾರ್ಕ್-119ಲಂಡನ್-97ಮುಂಬೈ-92ಬೀಜಿಂಗ್-91ಶಾಂಘೈ-87ಶೆನ್ಜೆನ್-84ಹಾಂಗ್ ಕಾಂಗ್-65ಮಾಸ್ಕೋ-59ನವದೆಹಲಿ-57ಸ್ಯಾನ್ ಫ್ರಾನ್ಸಿಸ್ಕೋ-52* ಜಾಗತಿಕ ಶ್ರೀಮಂತರು ಮತ್ತು ಒಟ್ಟು ಸಂಪತ್ತು (ಲಕ್ಷ ಕೋಟಿಗಳಲ್ಲಿ)ಇಲಾನ್ ಮಸ್ಕ್ 19.24ಜೆಫ್ ಬೆಜಾಸ್ 15.41ಬರ್ನಾರ್ಡ್ ಅರ್ನಾಲ್ಡ್ 14.57ಮಾರ್ಕ್ ಜುಕರ್ ಬರ್ಗ್ 13.16ಲ್ಯಾರಿ ಎಲ್ಲಿಸನ್ 11.99ವಾರೆನ್ ಬಫೆಟ್ 11.99ಸ್ಟೀವ್ ಬಾಲ್ಕರ್ 11.91ಬಿಲ್ ಗೇಟ್ಸ್ 11.49ಲ್ಯಾರಿ ಪೇಜ್ 10.24ಮುಕೇಶ್ ಅಂಬಾನಿ 9.57