* ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. * ಎಲ್‌ಐಸಿಯ ಬ್ರ್ಯಾಂಡ್‌ ನ ಮೌಲ್ಯ 81,634 ಕೋಟಿ (9.8 ಬಿಲಿಯನ್ ಡಾಲರ್‌) ಆಗಿದೆ ಎಂದು ಲಂಡನ್ ಮೂಲದ ಬ್ರ್ಯಾಂಡ್‌ ಫೈನಾನ್ಸ್ ಇನ್ಷೂರೆನ್ಸ್‌ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯಲ್ಲಿ ತಿಳಿಸಿದೆ.* ತೈವಾನ್‌ನ ಕ್ಯಾಥೆ ಜೀವ ವಿಮಾ ಸಂಸ್ಥೆಯು ಎರಡನೇ ಬಲಿಷ್ಠ ಬ್ರಾಂಡ್ ಮೌಲ್ಯ ಹೊಂದಿದೆ. ಇದರ ಬ್ರಾಂಡ್ ಮೌಲ್ಯ 40,817 ಕೋಟಿ ಆಗಿದೆ. ಮೂರನೇ ಸ್ಥಾನ ಪಡೆದುಕೊಂಡಿರುವ ಆಸ್ಟ್ರೇಲಿಯಾದ ಎನ್‌ಆರ್‌ಎಂಎ ಇನ್ಸೂರೆನ್ಸ್ ಕಂಪನಿಯು 10,900 ಕೋಟಿ ಬ್ರಾಂಡ್ ಮೌಲ್ಯ ಹೊಂದಿದೆ ಎಂದು ವರದಿ ತಿಳಿಸಿದೆ.* ವಿಮಾ ಕಂತು ಸಂಗ್ರಹದಲ್ಲೂ ಎಲ್‌ಐಸಿ ದಾಖಲೆ ಬರೆದಿದೆ. 2023ರಲ್ಲಿ 39.090 ಕೋಟಿ ಹಣ ಸಂಗ್ರಹಿಸಿದೆ. ಎಸ್‌ಬಿಐ ಲೈಫ್ ಇನ್ಸೂರೆನ್ಸ್ 15,197 ಕೋಟಿ ಹಾಗೂ ಎಚ್‌ಡಿಎಫ್‌ಸಿ ಲೈಫ್ ಇನ್ಸೂರೆನ್ಸ್ 10.970 ಕೋಟಿ ವಿಮಾ ಕಂತು ಸಂಗ್ರಹಿಸಿದೆ ಎಂದು ತಿಳಿಸಿದೆ.* ಬ್ರ್ಯಾಂಡ್‌ ಸ್ಟ್ರೆಂಥ್‌ ಇಂಡೆಕ್ಸ್‌ನಲ್ಲಿ ಎಲ್‌ಐಸಿ ಶೇ.88.3ರಷ್ಟು ಅಂಕ ಹೊಂದಿದ್ದು, ಹಾಗೂ ಎಲ್‌ಐಸಿ ನಂತರದ ಸ್ಥಾನವನ್ನು ಕ್ಯಾಥೆ ಲೈಫ್‌ ಇನ್ಷೂರೆನ್ಷ್‌, ಎನ್‌ಆರ್‌ಎಂಎ ಇನ್ಷೂರೆನ್ಷ್‌ ಹೊಂದಿವೆ. ಇನ್ನು ಬ್ರ್ಯಾಂಡ್‌ ಮೌಲ್ಯದಲ್ಲಿ ಚೀನಾದ ಪಿಂಗ್‌ ಆ್ಯನ್‌, ಚೀನಾ ಲೈಫ್ ಇನ್ಷೂರೆನ್ಸ್‌ ಮತ್ತು ಸಿಪಿಐಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.* ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗಿಗಳಿಗೆ ಹಾಗೂ 30,000 ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.