Job Description: * ಎಚ್‌ಎಸ್‌ಬಿಸಿ ಇಂಡಿಯಾ ಬ್ಯಾಂಕ್‌ನ (HSBC INDIA) ಬ್ರಾಂಡ್‌ ರಾಯಭಾರಿಯಾಗಿ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಅವರು ನೇಮಕಗೊಂಡಿದ್ದಾರೆ.* HSBC ಯು ಕ್ರೀಡೆಯಲ್ಲಿ ಉತ್ಕೃಷ್ಟತೆ, ವಿಶ್ವಾಸಾರ್ಹತೆ ಮತ್ತು ನಂಬಿಕೆಗೆ ಹೆಸರುವಾಸಿಯಾಗಿದ್ದು, ಅವುಗಳನ್ನು ಬಿಂಬಿಸಲು ಕೊಹ್ಲಿ ಅವರು ಸಮರ್ಥ ರಾಯಭಾರಿಯಾಗಿದ್ದಾರೆ ಎಂದು HSBC ಇಂಡಿಯಾದ CEO ಹಿತೇಂದ್ರ ದವೆ ಅವರು ಹೇಳಿದರು.* ಕಂಪನಿಯ ಹೇಳಿಕೆಯ ಪ್ರಕಾರ, ಭಾರತೀಯ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ಆಟಗಾರರಾದ ವಿರಾಟ್‌ ಕೊಹ್ಲಿ HSBCಯೊಂದಿಗೆ "ಅವಕಾಶಗಳ ಜಗತ್ತನ್ನು ತೆರೆಯುವ" ಧ್ಯೇಯವನ್ನು ಹೆಚ್ಚಿಸಲು ಬ್ರಾಂಡ್‌ ರಾಯಭಾರಿಯಾಗಿ ಸೇರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.