Job Description: * ನ್ಯೂಯಾರ್ಕ್ ನ ಮುಖ್ಯ ನ್ಯಾಯಮೂರ್ತಿಯಾಗಿ ರೋವನ್ ವಿಲ್ಸನ್ ಅವರನ್ನು ನೇಮಕ ಮಾಡಲಾಗುತ್ತದೆ. ಈ ಹುದ್ದೆಗೇರುತ್ತಿರುವ ಕಪ್ಪು ಜನಾಂಗದ ಮೊದಲ ವ್ಯೆಕ್ತಿ ಇವರಾಗಿದ್ದಾರೆ.* 62 ವರ್ಷದ ವಯಸ್ಸಿನ ವಿಲ್ಸನ್ ಅವರು 2017ರಿಂದ ಕೋರ್ಟ್ ಆಫ್ ಅಪಿನ ಸಹಾಯಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದು, ಲಿಬರಲ್ ಪಕ್ಷದ ಸೆನೆಟರ್‌ಗಳ ವಿಶ್ವಾಸ ಗಳಿಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ.* 'ವಿಲ್ಸನ್ ಅವರು ಅತ್ಯಂತ ಚಿಂತನಶೀಲ ಹಾಗೂ ದೇಶದ ದಕ್ಷ ನ್ಯಾಯಮೂರ್ತಿಗಳಲ್ಲಿ ಒಬ್ಬರು ಹೀಗಾಗಿ ಅವರನ್ನು ಈ ಹುದ್ದೆಗೆ ನೇಮಿಸಲು ನಿರ್ಧರಿಸಲಾಗಿದೆ' ಎಂದು ಸೆನೆಟ್‌ನ ನ್ಯಾಯಾಂಗ ಸಮಿತಿಯ ಮುಖ್ಯಸ್ಥ ಸೆನ್ ಬ್ರಾಡ್ ಹೊಯಲ್‌ಮನ್‌ ಸಿಗಾಲ್‌ ತಿಳಿಸಿದ್ದಾರೆ.* ಏಪ್ರಿಲ್ 18 ಸೆನೆಟ್‌ನ ಗ್ಯಾಲರಿಯಲ್ಲಿ ಕುಳಿತಿದ್ದ ವಿಲ್ಸನ್ ಅವರು ಇಡೀ ಕಲಾಪವನ್ನು ಮೌನವಾಗಿಯೇ ವೀಕ್ಷಿಸಿದರು. ನ್ಯಾಯಮೂರ್ತಿ ಜನೆಟ್ ಡಿಫಿಯೊರೆ ಅವರು 2022 ರ ಅಗಸ್ಟ್‌ನಲ್ಲಿ ರಾಜೀನಾಮೆ ನೀಡಿದ್ದರು.