Job Description: * ಜಾಗತಿಕ ಜನಸಂಖ್ಯಾ ವರದಿಯ ಪ್ರಕಾರ ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಇರುವ ದೇಶ ಎನಿಸಿದೆ, ಇಲ್ಲಿಯವರೆಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕಿದೆ.* ಪ್ರಸ್ತುತ ಭಾರತದಲ್ಲಿ ಚೀನಾಕ್ಕಿಂತ 30 ಲಕ್ಷದಷ್ಟು ಹೆಚ್ಚು ಜನರಿದ್ದಾರೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. ಭಾರತದಲ್ಲಿ ಒಟ್ಟು 142.8 ಕೋಟಿ ಜನಸಂಖ್ಯೆ ಇದ್ದರೆ, ಚೀನಾದಲ್ಲಿ 142.5 ಕೋಟಿ ಜನಸಂಖ್ಯೆ ಇದೆ ಎಂದು ವಿಶ್ವಸಂಸ್ಥೆಯು ಅಂದಾಜಿಸಲಾಗಿದೆ.* ವಿಶ್ವದ ಒಟ್ಟು ಜನಸಂಖ್ಯೆಯು 804 ಕೋಟಿಯನ್ನು ದಾಟಿದ್ದು, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಭಾರತದ ಜನಸಂಖ್ಯೆಯು ಶೇ. 17.75 ರಷ್ಟಿದೆ. ಚೀನಾದ ಜನಸಂಖ್ಯೆಯು ಶೇ.17.71 ರಷ್ಟಿದೆ. - 804.5 ಕೋಟಿ ವಿಶ್ವದ ಜನಸಂಖ್ಯೆ - 142.8 ಕೋಟಿ ಭಾರತದ ಜನಸಂಖ್ಯೆ - 142.5 ಕೋಟಿ ಚೀನಾದ ಜನಸಂಖ್ಯೆ - 34 ಕೋಟಿ ಅಮೆರಿಕಾದ ಜನಸಂಖ್ಯೆ - 485.2 ಕೋಟಿ ವಿಶ್ವದ ಉಳಿದ ಜನಸಂಖ್ಯೆ