* ಮಧ್ಯ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ 'ತಾನ್‌ಸೇನ್ ಸಮ್ಮಾನ್' ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತರ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್ ಹಾಸಣಗಿ ಅವರು ಆಯ್ಕೆಯಾಗಿದ್ದಾರೆ.* 2023 ಡಿಸೆಂಬರ್ 24ರಂದು ಗ್ವಾಲಿಯರ್ ನಲ್ಲಿ ನಡೆಯುವ ತಾನ್ ಸೆನ್ ಕಾರ್ಯಕ್ರಮದಲ್ಲಿ  ಗಣಪತಿ ಭಟ್ ಹಾಸಣಗಿ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.* ಯಲ್ಲಾಪುರ ತಾಲ್ಲೂಕಿನ ಹಾಸಣಗಿ ಗ್ರಾಮದ ಗಣಪತಿ ಭಟ್ ಹಾಸಣಗಿ ಅವರು ದಿ.ಪಂ. ಬಸವರಾಜ ರಾಜಗುರು ಅವರ ಶಿಷ್ಯ. ಇವರು ಕಿರಾಣಾ- ಗ್ವಾಲಿಯರ್ ಘರಾನಾ ಪರಂಪರೆಗೆ ಸೇರಿದವರು.*  ಗಣಪತಿಯವರು ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಗುರು ಕುಲ ಟ್ರಸ್ಟ್‌ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಭಾಯಿ ಭೀಮ್‌ಸೇನ್‌ ಜೋಶಿ ಪ್ರಶಸ್ತಿ (2006) ಸೇರಿದಂತೆ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.