Job Description: * ಭಾರತ ಕ್ರಿಕೆಟ್ ತಂಡದ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಹಾಗೂ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಡಿಸೆಂಬರ್ 13 ರಂದು ನಾಮನಿರ್ದೇಶನ ಮಾಡಲಾಗಿದೆ.* 33 ವರ್ಷದ ಮೊಹಮ್ಮದ್ ಶಮಿ ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದರು. ಆ ಪಂದ್ಯಾವಳಿಯಲ್ಲಿ ಭಾರತ ರನ್ನರ್ಸ್‌-ಅಪ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿತು. ಅವರು ಈ ವಿಶ್ವಕಪ್‌ನ 7 ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು ಗಳಿಸಿದ್ದಾರೆ.* ಮೊಹಮ್ಮದ್ ಶಮಿಯನ್ನು ಹೊರತುಪಡಿಸಿ ಹಾಕಿ ಆಟಗಾರರಾದ ಕೃಷ್ಣನ್ ಬಹಾದ್ದೂರ್ ಪಾಠಕ್, ಸುಶೀಲಾ ಚಾನು, ಆರ್ಚರಿಪಟು ಓಜಸ್ ಪ್ರವೀಣ್ ದೇವತಾಳೆ, ಅದಿತಿ ಗೋಪಿಚಂದ್ ಸ್ವಾಮಿ, ಬಾಕ್ಸರ್ ಮೊಹಮ್ಮದ್ ಹುಸಾಮುದ್ದೀನ್, ಚೆಸ್ ಆಟಗಾರ್ತಿ ಆರ್. ವೈಶಾಲಿ, ಗಾಲ್ಸ್ ಆಟಗಾರ್ತಿ ದೀಕ್ಷಾ ದಾಗರ್, ಶೂಟರ್ ಐಶ್ವರ್ಯಾ ಪ್ರತಾಪ್ ಸಿಂಗ್ ಥೋಮರ್, ಕುಸ್ತಿಪಟು ಅಂತಿಮ ಪಂಘಾಲ್, ವುಷು ಪಟು ಎನ್. ರೋಶಿಬಿನಾ ದೇವಿ ಮತ್ತು ಟಿಟಿ ಆಟಗಾರ್ತಿ ಐಹಿಕಾ ಮುಖರ್ಜಿ ಅವರ ಹೆಸರುಗಳೂ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.* ದ್ರೋಣಾಚಾರ್ಯ ಪ್ರಶಸ್ತಿ : ಗಣೇಶ್ ಪ್ರಭಾಕರನ್ (ಮಲ್ಲಕಂಬ), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್. ರಮೇಶ್ (ಚೆಸ್) ಮತ್ತು ಶಿವೇಂದ್ರ ಸಿಂಗ್ (ಹಾಕಿ) ಅವರನ್ನು ಶಿಫಾರಸು ಮಾಡಲಾಗಿದೆ.* ಧ್ಯಾನಚಂದ್ ಜೀವಮಾನ ಪ್ರಶಸ್ತಿ : ಕವಿತಾ (ಕಬಡ್ಡಿ), ಮಂಜೂಶಾ ಕನ್ಸರ್ (ಬ್ಯಾಡ್ಮಿಂಟನ್) ಹಾಗೂ ವಿನೀತ್ ಕುಮಾರ್ ಶರ್ಮಾ (ಹಾಕಿ ) ಅವರ ಹೆಸರುಗಳು ನಾಮನಿರ್ದೇಶನಗೊಂಡಿವೆ.