* ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು ಹಾಗೂ ಎಲ್ಲ ಒತ್ತೆಯಾಳುಗಳನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡಬೇಕೆಂಬ ಕರಡು ನಿರ್ಣಯದ ಪರವಾಗಿ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸಿದೆ.* 193 ಸದಸ್ಯರ ಸಾಮಾನ್ಯಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದವು. ನಿರ್ಣಯದ ವಿರೋಧವಾಗಿ ಅಮೆರಿಕಾ, ಆಸ್ಟ್ರೇಲಿಯಾ, ಇಸ್ರೇಲ್ ಮತ್ತು ಯುಎಸ್ ಸೇರಿದ್ದರೆ, ಜರ್ಮನಿ, ಹಂಗೇರಿ, ಇಟಲಿ, ಉಕ್ರೇನ್ ಮತ್ತು ಯುಕೆ ಸೇರಿ ಹತ್ತು ದೇಶಗಳು ಮತ ಚಲಾಯಿಸಿದವು.* ಬ್ರಿಟನ್ ಸೇರಿ 23 ದೇಶಗಳು ಮತದಾನದಿಂದ ಹೊರಗುಳಿದವು. ಕದನ ವಿರಾಮದ ಬೇಡಿಕೆಯ ನಿರ್ಣಯವನ್ನು ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಒಮನ್, ಖತರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಫೆಲೆಸ್ತೀನ್ ಸೇರಿದಂತೆ ಹಲವಾರು ದೇಶಗಳು ಪ್ರಾಯೋಜಿಸಿದ್ದವು.