Job Description: * ಹೈದರಾಬಾದ್ ನಲ್ಲಿ ಸುಮಾರು 146.5 ಕೋಟಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ (125 ಅಡಿ) ಬಾಬಾಸಾಹೇಬ್ ಅಂಬೇಡ್ಕರರ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದ್ದು, ಉದ್ಘಾಟನೆ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ದಿನದಂದು ಮಾಡಲಾಗಿದೆ.* ಈ ಪ್ರತಿಮೆ ಸ್ಥಾಪಪನೆಗೆ 2016ರ ಏಪ್ರಿಲ್ 14ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ. ಪೀಠದ ಎತ್ತರ 50 ಅಡಿ.* ಅಗಲ 45.5 ಅಡಿ. 791 ಟನ್ ಉಕ್ಕನ್ನು ಬಳಸಲಾಗಿದೆ. 96 ಮೆಟ್ರಿಕ್ ಟನ್ ಹಿತ್ತಾಳೆಯನ್ನು ಬಳಸಲಾಗಿದೆ. ಪದ್ಮಭೂಷಣ ಪುರಸ್ಕೃತರು, ಶಿಲ್ಪಿ ರಾಮ್ ವಾಂಜಿ ಸುತಾರ್ ಅವರು ಪ್ರತಿಮೆಯನ್ನು ತಯಾರಿಸಿದ್ದಾರೆ. 36 ಎಕರೆಯ ವಿಶಾಲ ಪ್ರದೇಶದಲ್ಲಿ ಅಂಬೇಡ್ಕರ್ ಸ್ಮಾರಕವೂ ಇದ್ದು, ರಾಕ್ ಗಾರ್ಡನ್ ನಿರ್ಮಿಸಲಾಗಿದೆ.