Job Description: * 15ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ಶುಭಾರಂಭ ಮಾಡಿದೆ. 48 ವರ್ಷಗಳ ಬಳಿಕ ಹಾಕಿ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿದಿರುವ ಭಾರತ, ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. * ಬಲಿಷ್ಠ ಸ್ಪೇನ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತ 2-0 ಅಂತರದ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ಅಭಿಷೇಕ್ ಹಳದಿ ಕಾರ್ಡ್ ಪಡೆದು ಭಾರತದ ಆತಂಕ ಹೆಚ್ಚಿಸಿದರು. ಹೀಗಾಗಿ 10 ಮಂದಿಯೊಂದಿಗೆ ಹೋರಾಟ ನಡೆಸಿತ್ತು. ಈ ವೇಳೆ ಸ್ಪೇನ್ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಪಡೆದಿತ್ತು. ಆದರೆ ಭಾರತದ ಹೋರಾಟಕ್ಕೆ ಸ್ಪೇನ್ ಗೋಲಿನ ಖಾತೆ ಆರಂಭಿಸಲು ಸಾಧ್ಯಾಗಲೇ ಇಲ್ಲ. * ಒಡಿಶಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಭಾರತ ಸಂಪೂರ್ಣ 12ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸಡಿಸಿದ ಗೋಲಿನಿಂದ ಭಾರತ ಖಾತೆ ತೆರೆಯಿತು. ಈ ನಡೆ ಸ್ಪೇನ್‌ಗೆ ತೀವ್ರ ಹಿನ್ನಡೆ ತಂದಿದೆ. ಪಂದ್ಯದ ಆರಂಭದಲ್ಲಿ ಭಾರತ ಗೋಲು ಸಿಡಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.