* ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ ಸೆಪ್ಟೆಂಬರ್ 27 ರಂದು ವಿಭಿನ್ನವಾದ ಡೂಡಲ್ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.* 1998ರಿಂದ 2023ರವರೆಗೆ ಗೂಗಲ್‌ನ ಲೊಗೊ ಮತ್ತು ನಿಯಮಿತವಾಗಿ ಪ್ರಕಟವಾದ ಡೂಡಲ್‌ಗಳನ್ನು ತನ್ನ ಬ್ಲಾಗ್‌ನಲ್ಲಿ ಗೂಗಲ್ ಹಂಚಿಕೊಂಡಿದೆ.* ಸರ್ಗಿ ಬೈನ್ ಮತ್ತು ಲ್ಯಾರಿ ಪೇಜ್ 1997ರಲ್ಲಿ ಮೊದಲ ಬಾರಿಗೆ ಸರ್ಚ್ ಎಂಜಿನ್‌ ಅಭಿವೃದ್ಧಿಪಡಿಸುವ ಕುರಿತು  ಸನ್ ಮೈಕ್ರೋಸಿಸ್ಟಮ್ಸ್ 1 ಲಕ್ಷ ಅಮೆರಿಕ್ ಡಾಲರ್ ಹೂಡಿಕೆಯೊಂದಿಗೆ 1998ರ ಸೆ.27ರಂದು ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಅಧಿಕೃತವಾಗಿ ಪ್ರಾರಂಭವಾಯಿತು.