* ಕರ್ನಾಟಕ ರಾಜ್ಯವು ಈ ವರ್ಷದ (2023) ರ “ಆಯುಷ್ಮಾನ್ ಉತ್ಕೃಷ್ಟತಾ ಪ್ರಶಸ್ತಿ'ಯನ್ನು  ಮುಡಿಗೇರಿಸಿಕೊಂಡಿದೆ.* ರಾಷ್ಟ್ರ ರಾಜಧಾನಿ ಹೊಸದೆಹಲಿಯಲ್ಲಿ ನಡೆದ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಾ. ರಂದೀಪ್ ಅವರು ಸೆಪ್ಟೆಂಬರ್ 25 ರಂದು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.* ಸೇವಾ ಕ್ಷೇತ್ರದ ಲಿಂಗ ಸಮಾನತೆಯ 2022ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ವರೆಗಿನ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು ಗುರುತಿಸಲ್ಪಟ್ಟಿದೆ.* ಧಾರವಾಡ ಜಿಲ್ಲಾಸ್ಪತ್ರೆಯು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023ರ ವರೆಗೆ ಅತಿ ಹೆಚ್ಚಿನ ಸಂಖ್ಯೆಯ ಡಿಜಿಟಲ್ ದಾಖಲಾತಿಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಗೆ ಸಂಪರ್ಕಿಸುವ ಮೂಲಕ ಸರಕಾರಿ ಸೌಲಭ್ಯ ಒದಗಿಸುವ ಕ್ಷೇತ್ರದಲ್ಲಿದೆ.