Job Description: * ವಿಶ್ವ ರೇಬಿಸ್ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಫ್ರೆಂಚ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಮರಣ ದಿನದ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವ ರೇಬಿಸ್ ದಿನವನ್ನು ಆಚರಿಸಲಾಗುತ್ತದೆ. ಲೂಯಿಸ್ ಪಾಶ್ಚರ್ ಮೊದಲ ಬಾರಿಗೆ ರೇಬೀಸ್ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ವೈದ್ಯಕೀಯ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಲೂಯಿಸ್ ಪಾಶ್ಚರ್ ಅವರನ್ನು ಸೂಕ್ಷ್ಮ ಜೀವ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.* 2023ರ ವಿಶ್ವ ರೇಬಿಸ್ ದಿನದ ಧೇಯವಾಕ್ಯ ಎಲ್ಲರೂ ಆರೋಗ್ಯಕ್ಕಾಗಿ : ಒಂದು ಆರೋಗ್ಯ ಎಲ್ಲರಿಗಾಗಿ(all for 1, one health for all) ಎಲ್ಲ ಎಂಬುವುದಾಗಿದೆ. * ರೇಬಿಸ್ ಒಂದು ವೈರಲ್ ಕಾಯಿಲೆಯಾಗಿದ್ದು ಮನುಷ್ಯರು, ನಾಯಿ, ಬೆಕ್ಕು, ಎಮ್ಮೆ, ಕುರಿ, ಮೇಕೆ, ಹಂದಿ, ಮತ್ತು ಸಸ್ತನಿಗಳಲ್ಲಿ ಈ ರೋಗ ಕಂಡುಬರುತ್ತದೆ.* ಲಿಸ್ಸಾ ವೈರಸ್ ಕುಟುಂಬಕ್ಕೆ ಸೇರಿದ ರೇಬಿಸ್ ವೈರಸ್‌ನಿಂದ ರೇಬಿಸ್ ರೋಗವು ಉಂಟಾಗುತ್ತದೆ. ರೇಬಿಸ್ ಹೊಂದಿರುವ ಪ್ರಾಣಿಗಳು ತಮ್ಮ ಲಾಲಾರಸದಲ್ಲಿ (ಜೊಲ್ಲು) ಹೆಚ್ಚಿನ ಪ್ರಮಾಣದಲ್ಲಿ ಈ ವೈರಸ್ ಸ್ರವಿಸುತ್ತವೆ. ಆರೋಗ್ಯವಂತ ನಾಯಿಗಳಿಗೆ ಇತರೆ ರೇಬಿಸ್ ರೋಗಪೀಡಿತ ನಾಯಿಗಳು ಕಚ್ಚುವುದರಿಂದ ಈ ರೋಗ ವರ್ಗಾಯಿಸಲ್ಪಡುತ್ತದೆ. ಮನುಷ್ಯರಲ್ಲಿ ಶೇ.99ರಷ್ಟು ರೇಬಿಸ್‌ ಪ್ರಕರಣಗಳು ನಾಯಿಗಳು ಕಚ್ಚುವುದರಿಂದ ಬರುತ್ತದೆ.* ರೇಬೀಸ್‌ನಲ್ಲಿ ಎರಡು ವಿಧಗಳಿವೆ. 1) ಫ್ಯೂರಿಯಸ್ ರೇಬೀಸ್: ಎನ್ಸೆಫಾಲಿಟಿಕ್ ರೇಬೀಸ್ ಎಂದೂ ಕರೆಯುತ್ತಾರೆ, ಇದು 80% ಮಾನವ ಪ್ರಕರಣಗಳಲ್ಲಿ ಕಂಡುಬರುತ್ತದೆ ಮತ್ತು ರೋಗಿಗಳು ಹೈಡ್ರೋಫೋಬಿಯಾವನ್ನು (ನೀರಿನ ಭಯ) ಹೊಂದಿರುತ್ತಾರೆ. 2) ಪಾರ್ಶ್ವವಾಯು ರೇಬೀಸ್: ಇದನ್ನು ಮೂಕ ರೇಬೀಸ್ ಎಂದೂ ಕರೆಯುತ್ತಾರೆ, ಇದು ಪ್ರಾಥಮಿಕವಾಗಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.