* ಪ್ರತೀ ವರ್ಷ ಮಧ್ಯಪ್ರದೇಶ ಸರಕಾರವು ಕೊಡಮಾಡುವ 2022 ಮತ್ತು 2023 ನೇ ಸಾಲಿನ “ರಾಷ್ಟ್ರೀಯ ಲತಾ ಮಂಗೇಷ್ಕರ್‌ ಪ್ರಶಸ್ತಿ' ವಿಜೇತರನ್ನು ಘೋಷಿಸಲಾಗಿದೆ.* ಖ್ಯಾತ ಸಂಗೀತಗಾರ ಉತ್ತಮ್ ಸಿಂಗ್ ಮತ್ತು ಹಿನ್ನೆಲೆ ಗಾಯಕಿ ಕೆಎಸ್ ಚಿತ್ರಾ ಅವರು ಸೆಪ್ಟೆಂಬರ್ 28 ರಂದು ನಡೆಯುವ ಸಮಾರಂಭದಲ್ಲಿ ಮಧ್ಯಪ್ರದೇಶ ಸರ್ಕಾರ ಕೊಡಮಾಡುವ 2022- 2023 ನೇ ಸಾಲಿನ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಆಗಸ್ಟ್ 20 ರಂದು (ಮಂಗಳವಾರ) ತಿಳಿಸಿದ್ದಾರೆ.* ರಾಜ್ಯ ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು ಈ ಪ್ರಶಸ್ತಿಯನ್ನು ನೀಡುತ್ತದೆ.* 2022 ರಲ್ಲಿ ಉತ್ತಮ್ ಸಿಂಗ್ ಅವರಿಗೆ ಮಂಗೇಶ್ಕರ್ ಪ್ರಶಸ್ತಿ ಲಭಿಸಲಿದ್ದು, 2023ಕ್ಕೆ ರಲ್ಲಿ ಕೆಎಸ್ ಚಿತ್ರಾ ಸ್ವೀಕರಿಸಲಿದ್ದಾರೆ.* ಮಂಗೇಶ್ಕರ್ ಅವರ ಸ್ಮರಣಾರ್ಥ ರಾಜ್ಯ ಸರ್ಕಾರ ನಿರ್ಮಿಸಿರುವ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.* 1984 ರಲ್ಲಿ ಸ್ಥಾಪಿಸಲಾದ ಪ್ರಶಸ್ತಿಯು ಲಘು ಸಂಗೀತ ಕ್ಷೇತ್ರದಲ್ಲಿ ಕಲಾತ್ಮಕ ಶ್ರೇಷ್ಠತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು 2 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ.* ಈ ಹಿಂದೆ ಹಿರಿಯ ಕಲಾವಿದರಾದ ನೌಶಾದ್, ಕಿಶೋರ್ ಕುಮಾರ್ ಮತ್ತು ಆಶಾ ಭೋಂಸ್ಲೆ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.