* ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಅನ್ನು ಆಗಸ್ಟ್ 24. 2024 ರಂದು ಚೆನ್ನೈನ ತಿರುವಿದಂಧೈನಿಂದ ತಮಿಳುನಾಡು ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಜೋನ್ ಇಂಡಿಯಾವು ಮಾರ್ಟಿನ್ ಗ್ರೂಪ್‌ ಜೊತೆ ಸೇರಿ ಉಡಾವಣೆ ಮಾಡಿದೆ.* ಈ ಉಡಾವಣೆಯನ್ನು ಮೊಬೈಲ್ ಲಾಂಚರ್ ಬಳಸಿ ನಡೆಸಲಾಗುವುದು, ಇದು ದೇಶದ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.* ರುಮಿ-1 ರಾಕೆಟ್ ಮೂರು ಕ್ಯೂಬ್ ಸೆಟಿಲೈಟ್ ಮತ್ತು 50 ಪಿಕೋ ಸೆಟಿಲೈಟ್ಗಳನ್ನು ಹೊತ್ತು ಭೂಮಿಯಿಂದ 35 ಕಿಮೀ ಎತ್ತರದ ಕಕ್ಷೆವರೆಗೂ ಹೋಗಿ ಅಲ್ಲಿ ಎಲ್ಲಾ ಪೇಲೋಡ್ಗಳನ್ನು ಅವುಗಳ ನಿಗದಿತ ಜಾಗಕ್ಕೆ ಬಿಟ್ಟು ವಾಪಸ್ ಬರಲಿದೆ.* ಈ ರಾಕೆಟ್ನಲ್ಲಿ ಹೈಬ್ರಿಡ್ ಪ್ರೊಪಲ್ಷನ್ ಸಿಸ್ಟಂ ಇರುತ್ತದೆ. ಲಿಕ್ವಿಡ್ ಆಕ್ಸಿಡೈಸರ್ ಮತ್ತು ಸಾಲಿಡ್ ಫುಯೆಲ್ ಹೀಗೆ ಎರಡು ರೀತಿಯ ಇಂಧನದ ವ್ಯವಸ್ಥೆ ಮಾಡಲಾಗಿರುತ್ತದೆ.* ರುಮಿ-1 ರಾಕೆಟ್ ಅನ್ನು ತಯಾರಿಸಿದ್ದು ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆಯಾಗಿದ್ದು, ಇದರ ಸಿಇಒ ಆನಂದ್ ಮೇಗಲಿಂಗಂ ಅವರು ಈ ರಾಕೆಟ್ಗೆ ಇಡಲಾಗಿರುವ ರುಮಿ ಹೆಸರು ಆನಂದ್ ಮೇಗಲಿಂಗಂ ಅವರ ಮಗನದ್ದು. ಅವರ ಮಗನ ಹೆಸರು ರುಮೇಂದ್ರನ್.