* ಪ್ರಸಕ್ತ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಅಮೆರಿಕವು ಭಾರತದ ಆಗ್ರ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಆಗಸ್ಟ್ 23 ರಂದು (ಶುಕ್ರವಾರ) ತಿಳಿಸಿದೆ.* ಇದೇ ಅವಧಿಯಲ್ಲಿ ಭಾರತವು ಚೀನಾದೊಂದಿಗೆ ವ್ಯಾಪಾರ ಕೊರತೆ ದಾಖಲೆಯ ₹3.49 ಲಕ್ಷ ಕೋಟಿಯಷ್ಟಾಗಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ತಿಳಿಸಿದೆ. ದೇಶದ ಸರಕುಗಳ ರಫ್ತು ಶೇ 5ರಷ್ಟು ಏರಿಕೆಯಾಗಿದ್ದು, ₹19.34 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಹೇಳಿದೆ.* ವ್ಯಾಪಾರ ಕೊರತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮುಂಚೂಣಿಯಲ್ಲಿದೆ. ಚೀನಾಕ್ಕೆ ಭಾರತದ ರಫ್ತು ಪ್ರಮಾಣ ₹71,318 ಕೋಟಿಯಷ್ಟಿದ್ದರೆ, ಆಮದು ಪ್ರಮಾಣ ₹4.20 ಲಕ್ಷ ಕೋಟಿ ಇದೆ.* ಅಮೆರಿಕ, ಯುಎಇ, ನೆದರ್ಲೆಂಡ್ಸ್, ಸಿಂಗಪುರ ಮತ್ತು ಚೀನಾ ಪ್ರಮುಖ ರಫ್ತು ರಾಷ್ಟ್ರಗಳಾಗಿವೆ.  ಇಟಲಿ, ಬೆಲ್ವಿಯಂ, ನೇಪಾಳ, ಹಾಂಗ್‌ಕಾಂಗ್ ಸೇರಿದಂತೆ 98 ದೇಶಗಳಿಗೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಈ ದೇಶಗಳಿಗೆ ಮಾಡುವ ಶೇ 24ರಷ್ಟಿದೆ. * 2023 ರ ಜನವರಿ - ಜೂನ್ ಅವಧಿಯಲ್ಲಿ ಅಮೆರಿಕಕ್ಕೆ ರಫ್ತು ಮೌಲ್ಯ ₹3.16 ಲಕ್ಷ ಕೋಟಿಯಷ್ಟಿತ್ತು. 2024 ರ ಅವಧಿಯಲ್ಲಿ ₹3.49 ಲಕ್ಷ ಕೋಟಿಯಾಗಿದ್ದು, ಶೇ 100 ರಷ್ಟು ಏರಿಕೆಯಾಗಿದೆ. * '2023-24 ರ ಹಣಕಾಸು ವರ್ಷದಲ್ಲಿ ಅಮೆರಿಕಕ್ಕಿಂತ ಚೀನಾ ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು. 2024ರ ಜನವರಿ-ಜೂನ್ ಅವಧಿಯಲ್ಲಿ ಅಮೆರಿಕವು ಭಾರತದ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಒಟ್ಟು ವ್ಯಾಪಾರ ಮೌಲ್ಯವು ₹5.24 ಲಕ್ಷ ಕೋಟಿಯಾಗಿದ್ದು, ಶೇ 5ರಷ್ಟು ಏರಿಕೆ ಆಗಿದೆ' ಎಂದು ಜಿಟಿಆರ್‌ಐ ಸಂಸ್ಥಾಪಕ ತಾಣ ಅಜಯ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.* ಕಬ್ಬಿಣದ ಅದಿರು, ಔಷಧಗಳು, ಬಾಸ್ಮತಿ ಅಕ್ಕಿ, ರಾಸಾಯನಿಕಗಳು ಮತ್ತು ಸ್ಮಾರ್ಟ್‌ ಫೋನ್‌ಗಳು ರಪ್ತಿನಿಂದಾಗಿ ಭಾರತದ ರಫ್ತು ಮೌಲ್ಯ ಹೆಚ್ಚಳವಾಗಿದೆ. * ಸಕ್ಕರೆ ರಫ್ತು ಪ್ರಮಾಣ ಶೇ 40ರಷ್ಟು ಕುಸಿದಿದ್ದು, 12,417 ಕೋಟಿಯಾಗಿದೆ. ಟೆಲಿಕಾಂ, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌ಗಳ ರಫ್ತು ₹83,903 ಕೋಟಿಯಾಗಿದೆ.* ಪೆಟ್ರೋಲಿಯಂ ಉತ್ಪನ್ನಗಳ ಒಳ ರಫ್ತು ಸ್ಥಿರವಾಗಿದ್ದು, 3.59 ಲಕ್ಷ ಕೋಟಿಯಾಗಿದೆ. ಗಾರ್ಮೆಂಟ್ಸ್ ರಫ್ತು ಪ್ರಮಾಣ ₹69,217 ಕೋಟಿಯಾಗಿದ್ದು, ಶೇ 2ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.