Job Description: ➤ ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ದಿನವೊಂದಕ್ಕೆ ಸಾಕ್ಷಿಯಾಗಿದೆ. ದೇಶದ ಅತ್ಯುನ್ನತ ಸೇನಾ ತರಬೇತಿ ಸಂಸ್ಥೆಯಾದ ಮಹಾರಾಷ್ಟ್ರದ ಖಡಕ್ವಾಸ್ಲಾದಲ್ಲಿರುವ 'ರಾಷ್ಟ್ರೀಯ ರಕ್ಷಣಾ ಅಕಾಡೆಮಿ'ಯಿಂದ (NDA) ತೇರ್ಗಡೆಯಾದ ದೇಶದ ಮೊದಲ ಮಹಿಳಾ ಕೆಡೆಟ್‌ಗಳ ಬ್ಯಾಚ್, ತಮ್ಮ ಅಂತಿಮ ಹಂತದ ಪ್ರೀ-ಕಮಿಷನಿಂಗ್ ತರಬೇತಿಗಾಗಿ ಡೆಹ್ರಾಡೂನ್‌ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ (IMA) ಗೆ ಯಶಸ್ವಿಯಾಗಿ ಸೇರ್ಪಡೆಗೊಂಡಿದೆ.➤ ಭಾರತೀಯ ಮಿಲಿಟರಿ ಅಕಾಡೆಮಿ (IMA) ತನ್ನ 92 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳನ್ನು ತರಬೇತಿಗಾಗಿ ಮುಕ್ತವಾಗಿ ಬರಮಾಡಿಕೊಂಡಿದೆ. ➤ ಒಟ್ಟು ಕೆಡೆಟ್‌ಗಳು: ಎನ್‌ಡಿಎ (NDA) ನ 148 ನೇ ಕೋರ್ಸ್‌ನಿಂದ ಯಶಸ್ವಿಯಾಗಿ ತೇರ್ಗಡೆಯಾದ ಒಟ್ಟು 17 ಮಹಿಳಾ ಕೆಡೆಟ್‌ಗಳ ಪೈಕಿ 9 ಮಹಿಳಾ ಕೆಡೆಟ್‌ಗಳು ಭಾರತೀಯ ಭೂಸೇನೆಯನ್ನು (Indian Army) ಆಯ್ಕೆ ಮಾಡಿಕೊಂಡು ಐಎಂಎ (IMA) ಸೇರಿದ್ದಾರೆ.➤ ಇವರು ಈಗಾಗಲೇ NDA ನಲ್ಲಿ 3 ವರ್ಷಗಳ ಕಠಿಣ ಜಂಟಿ-ಸೇನಾ ತರಬೇತಿಯನ್ನು ಮುಗಿಸಿದ್ದು, ಇನ್ನುಳಿದ 1 ವರ್ಷದ ವಿಶೇಷ ತರಬೇತಿಯನ್ನು ಐಎಂಎನಲ್ಲಿ ಪಡೆದು ಭಾರತೀಯ ಸೇನೆಯಲ್ಲಿ ಖಾಯಂ ಕಮಿಷನ್ಡ್ ಅಧಿಕಾರಿಗಳಾಗಿ (Permanent Commissioned Officers) ಅಧಿಕಾರ ಸ್ವೀಕರಿಸಲಿದ್ದಾರೆ.➤ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: ಹಿಂದೆ ಮಹಿಳೆಯರಿಗೆ ಎನ್‌ಡಿಎ (NDA) ಪ್ರವೇಶಕ್ಕೆ ಅವಕಾಶವಿರಲಿಲ್ಲ. ಮಹಿಳೆಯರು ಶಾರ್ಟ್ ಸರ್ವಿಸ್ ಕಮಿಷನ್ (SSC) ಮೂಲಕ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಮೂಲಕ ಮಾತ್ರ ಸೇನೆಗೆ ಸೇರಬಹುದಿತ್ತು. ಆದರೆ, ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ಆದೇಶದ ಅನ್ವಯ, ಮಹಿಳೆಯರಿಗೂ ಎನ್‌ಡಿಎ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ತದನಂತರ ಆಗಸ್ಟ್ 2022 ರಲ್ಲಿ ಮೊದಲ ಬ್ಯಾಚ್‌ನ ಮಹಿಳಾ ಕೆಡೆಟ್‌ಗಳು ಎನ್‌ಡಿಎಗೆ ದಾಖಲಾಗಿದ್ದರು.