Job Description: * ಪ್ರತೀ ವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ ಆಚರಿಸಲಾಗಿದ್ದು, ಇದನ್ನು‘ಅಂತರರಾಷ್ಟ್ರೀಯ ಮಾತೃಭೂಮಿ ದಿನ’ ಎಂದೂ ಕರೆಯುತ್ತಾರೆ.* ಏಪ್ರಿಲ್ 22, 1970 ರಂದು ಸ್ಕಾನ್ ಫ್ರಾನ್ಸಿಸ್ಕೊದ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರರಾದ ಜಾನ್ ಮೇಕ್ ಕಾನ್ನೆಲ್ ರವರು ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ವಿಶ್ವ ಭೂಮಿ ದಿನದ ಪ್ರಸ್ತಾವನೆಯ ನಂತರ ವಿಶ್ವ ಭೂಮಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ‌* ಏಪ್ರಿಲ್ 22 ರಂದು ವಿಶ್ವ ಭೂಮಿ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ವಸಂತಕಾಲ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲವಿರುತ್ತದೆ. ಹಾಗಾಗಿ, ಹವಾಮಾನ ಸಹ ಸಹನೀಯವಾಗಿರುವುದರಿಂದ, ಭೂ ದಿನದ ಆಚರಣೆ ಹೆಚ್ಚು ಆಹ್ಲಾದಕರವಾಗಿರುತ್ತದೆ.* 2023ರ ವಿಶ್ವ ಭೂಮಿ ದಿನದ ಥೀಮ್ "ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ" ಎಂಬುದು ಈ ವರ್ಷದ ಥೀಮ್ ತಿಳಿಸಿದೆ.🪶 WED 2022ರ ಥೀಮ್:ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ🪶 WED 2021ರ ಥೀಮ್: ನಮ್ಮ ಭೂಮಿಯನ್ನು ಮರುಸ್ಥಾಪಿಸಿ🪶 WED 2020ರ ಥೀಮ್: ಹವಾಮಾನ ಕ್ರಿಯೆ🪶WED 2019ರ ಥೀಮ್: ನಮ್ಮ ಜಾತಿಗಳನ್ನು ರಕ್ಷಿಸಿ🪶 WED 2018ರ ಥೀಮ್: ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ🪶 WED 2017ರ ಥೀಮ್: ಪರಿಸರ ಮತ್ತು ಹವಾಮಾನ ಸಾಕ್ಷರತೆ