Job Description: * ಜಾರ್ಖಂಡ್‌ನ ಗುಮಾ ಜಿಲ್ಲೆಯು ವಿಪರೀತ ಬಡತನ, ನಕ್ಸಲರ ಹಾವಳಿಯಿಂದ ತತ್ತರಿಸಿದ್ದ ಗುಮಾ ಜಿಲ್ಲೆಯು 'ರಾಗಿ ಕೃಷಿ'ಯಿಂದ ದೇಶದ ಗಮನ ಸೆಳೆದಿದ್ದು, ಹಾಗೂ 'ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆ ಮೂಲಕ ಅಭಿವೃದ್ಧಿ ವಿಭಾಗದಡಿ ಗುಮ್ಮಾ ಜಿಲ್ಲೆಯನ್ನು ಆಯ್ಕೆ, ಮಾಡಲಾಗಿದೆ.* ಈ ರಾಗಿ ಮೌನ ಕ್ರಾಂತಿಯ ಯುವ ಜಿಲ್ಲಾಧಿಕಾರಿಯಾಗಿರುವ ಸುಶಾಂತ ಗೌರವ ರವರ ಕಾಳಜಿಗೆ ಮತ್ತು ಪರಿಶ್ರಮದ ಫಲವಾಗಿ ಪ್ರಧಾನಿ ನರೇಂದ್ರ ಮೋದಿಯವರು 'ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆಗಾಗಿ ಪ್ರದಾನ ಮಂತ್ರಿಗಳ' ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಏಪ್ರಿಲ್ 21 ರಂದು ನಡೆದ ಕಾರ್ಯಕ್ರಮದಲ್ಲಿ ಸುಶಾಂತ್ ಗೌರವ ರವರಿಗೆ ಈ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.* ರಾಷ್ಟ್ರೀಯ ಬೀಜ ನಿಗಣದಿಂದ ಉತ್ತಮ ಗುಣಮಟ್ಟದ ರಾಗಿ ಖರೀದಿಸಿ ಬಿತ್ತನೆ ಆರಂಭಿಸಿದ್ದು, ಹಾಗೂ ರಾಗಿ ಕೃಷಿಯ ಆರಂಭದಲ್ಲಿ 1,600 ಎಕರೆ ರಾಗಿ ಬಿತ್ತನೆ ಮಾಡಿದ್ದು, ಕ್ರಮೇಣ ಬಿತ್ತನೆ 3,600 ಎಕರೆ ಏರಿಕೆಯಾಗಿ ಒಟ್ಟು ಶೇಕಡಾ 300 ರಷ್ಟುಹೆಚ್ಚಳ ಕಂಡುಬಂದಿದೆ ಎಂದು ಸುಶಾಂತ್ ಗೌರವ ರವರು ತಿಳಿಸಿದ್ದಾರೆ.