Job Description: * ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ದಿನವಾಗಿ ಆಚರಣೆ ಮಾಡಲಾಗುತ್ತದೆ. 2023ರ ವಿಶ್ವ ಪಾರಂಪರಿಕ ದಿನದ ಥೀಮ್ "ಪರಂಪರೆ ಬದಲಾವಣೆಗಳು". * ವಿಶ್ವ ಪರಂಪರೆ ದಿನ ಆಚರಿಸುವ ಮುಖ್ಯ ಉದ್ದೇಶ ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸ, ವೈವಿಧ್ಯತೆ ಅವುಗಳನ್ನು ರಕ್ಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಚರಣೆ ಮಾಡಲಾಗುತ್ತದೆ.* ಈ ವಿಶೇಷ ದಿನವನ್ನು ಜಾಗತಿಕವಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಪುರಾತನ ತಾಣಗಳು ಮತ್ತು ಸ್ಮಾರಕಗಳ ಬಗ್ಗೆ ಯುವ ಪೀಳಿಗೆಗೆ ಮಹತ್ವದ ಸಂದೇಶ ತಿಳಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.* ಪ್ರತಿ ವರ್ಷ ಬೇರೆ ಬೇರೆ ಥೀಮ್‌ನಲ್ಲಿ ಪಾರಂಪರಿಕ ದಿನ ಆಚರಣೆ ಮಾಡಲಾಗುತ್ತದೆ. "ಸಂಸ್ಕೃತಿ, ಪರಂಪರೆ, ಜವಾಬ್ದಾರಿ ಹಂಚಿಕೊಳ್ಳಿ" ಎಂಬುದು ಈ ವರ್ಷದ ಥೀಮ್ ಆಗಿದೆ.