* ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸರಕಾರದಿಂದ ಅಂಗೀಕೃತವಾಗ ಒಂದು  ನವೋದ್ಯಮ (ಸ್ಟಾರ್ಟಪ್) ಸ್ಥಾಪನೆಗೆ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ನಿರ್ಧರಿಸಿದೆ.* ದೇಶದ 125 ಜಿಲ್ಲೆಗಳಲ್ಲಿ ಒಂದು ನವೋದ್ಯಮವಿಲ್ಲ, ಆ ಜಿಲ್ಲೆಗಳಲ್ಲಿ ಸ್ಟಾರ್ಟ್ ಅಪ್ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು' ಎಂದು ಡಿಪಿಐಐಟಿ ಜಂಟಿ ಕಾರ್ಯದರ್ಶಿ ಸಂಜೀವ್ ಅವರು ತಿಳಿಸಿದರು.* ಸ್ಟಾರ್ಟ್‌ ಅಪ್‌ಗಳು ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ. ಜಿಲ್ಲೆಗಳಲ್ಲಿ ಸ್ಥಾಪನೆಯಾದರೆ ಅಲ್ಲಿರುವ ಹೊಸ ಉದ್ದಿಮೆದಾರರಿಗೂ ಪ್ರೇರಣೆ ಸಿಗಲಿದೆ ಎಂದರು.* ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಐಎಸಿ ಅಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿವೆ. ಸರ್ಕಾರದ ಸಾಲ ವಿತರಣಾ ಯೋಜನೆಯಡಿಯೂ ಅವುಗಳಿಗೆ ಆರ್ಥಿಕ ನೆರವು ಲಭಿಸುತ್ತಿದೆ ಎಂದು ತಿಳಿಸಿದರು.* ಮಹಾರಾಷ್ಟ್ರದಲ್ಲಿ ಅತಿಹೆಚ್ಚು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿರುವ ಸ್ಟಾರ್ಟ್‌ ಅಪ್‌ಗಳಿವೆ. ಆ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ ಎಂದರು.* 2016 ರಲ್ಲಿ ಪ್ರಧಾನಿ ನರೇದ್ರ ಮೋದಿ ಅವರು ಸ್ಟಾರ್ಟ್ ಅಪ್ ಇಂಡಿಯಾ ಕ್ಕೆ ಚಾಲನೆ ನೀಡಿದರು. ದೇಶದಲ್ಲಿ 2016 ರಲ್ಲಿ 400 ಸ್ಟಾರ್ಟ್ ಅಪ್ ಗಳು 2023 ಡಿಸೆಂಬರ್ ಅಂತ್ಯಕ್ಕೆ ೧.17 ಲಕ್ಷ ಸ್ಟಾರ್ಟ್ ಅಪ್ ಸತಿದೆ ಎಂದು ಮಾಹಿತಿ ನೀಡಿದ್ದಾರೆ.* DPIIT ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ 112 ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳು ಸುಮಾರು $350 ಶತಕೋಟಿ ಮೌಲ್ಯವನ್ನು ಹೊಂದಿವೆ. ಯುನಿಕಾರ್ನ್ $1 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಕಂಪನಿಯನ್ನು ಸೂಚಿಸುತ್ತದೆ.* ಜನವರಿ 16 ರಂದು ಸ್ಟಾರ್ಟ್‌ಅಪ್‌ಗಳ ರಾಜ್ಯ ಶ್ರೇಯಾಂಕ ಪ್ರಶಸ್ತಿ 2022 ರ ಪ್ರಕಾರ ಗುಜರಾತ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು "ಅತ್ಯುತ್ತಮ ಪ್ರದರ್ಶನ" ರಾಜ್ಯಗಳಾಗಿವೆ. ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣವು "ಉನ್ನತ ಪ್ರದರ್ಶನ" ಎಂದು ಸ್ಥಾನ ಪಡೆದಿವೆ.