* ಜಗತ್ತಿನ ಅತ್ಯಂತ ಪ್ರಬಲ ಮತ್ತು ಬಲಯುತವಾಗಿರುವ ಕರೆನ್ಸಿಗಳ ಪಟ್ಟಿಯನ್ನು ಫೋರ್ಬ್ಸ್‌ ನಿಯತಕಾಲಿಕ ಸಿದ್ಧಪಡಿಸಿದೆ, ಈ ವರದಿಯ ಅನ್ವಯ ಭಾರತದ ಕರೆನ್ಸಿ ರೂಪಾಯಿ 15ನೇ ಸ್ಥಾನ ಪಡೆದುಕೊಂಡಿದೆ. * ಫೋರ್ಬ್ಸ್‌ ನಿಯತಕಾಲಿಕ ಸಿದ್ಧಪಡಿಸಿದ ಈ ಪಟ್ಟಿಯಲ್ಲಿ ಕುವೈತ್‌ 'ದಿನಾರ್‌' ಮೊದಲ ಸ್ಥಾನ (270.23 ರೂ.), ಬಹ್ರೈನ್‌ನ ದಿನಾರ್‌ (220.4 ರೂ) 2ನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕದ ಡಾಲರ್‌ ಹತ್ತನೇ ಸ್ಥಾನ ಪಡೆದುಕೊಂಡಿದೆ. * ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಒಮಾನಿ ರಿಯಾಲ್ (ರೂ. 215.84 ಮತ್ತು $2.60) ಮತ್ತು  ಜೋರ್ಡಾನ್ ದಿನಾರ್ (ರೂ. 117.10 ಮತ್ತು $1.141), ಜಿಬ್ರಾಲ್ಟರ್ ಪೌಂಡ್ (ರೂ. 105.52 ಮತ್ತು $1.27), ಬ್ರಿಟಿಷ್ ಪೌಂಡ್ (ರೂ. 105.54 ಮತ್ತು $1.27), ಕೇಯ್. $1.20), ಸ್ವಿಸ್ ಫ್ರಾಂಕ್ (ರೂ. 97.54 ಮತ್ತು $1.17) ಮತ್ತು ಯುರೋ (ರೂ. 90.80 ಮತ್ತು $1.09) ಕ್ರಮವಾಗಿ ನಂತರದ ಸ್ಥಾನವನ್ನು ಪಡೆದುಕೊಂಡಿವೆ. * ಮೊದಲ ಸ್ಥಾನದಲ್ಲಿರುವ ಕುವೈನ ದಿನಾರ್, 1960 ರಲ್ಲಿ ಪರಿಚಯಿಸಲ್ಪಟ್ಟ ಸಮಯದಿಂದ ಸತತವಾಗಿ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎಂದು ಸ್ಥಾನ ಪಡೆದಿದೆ.* ಅಮೇರಿಕ ಜಗತ್ತಿನ ಪ್ರಮುಖ ಕರೆನ್ಸಿಯಾಗಿದ್ದರೂ, ಅದು 10ನೇ ಸ್ಥಾನದಲ್ಲಿ ಇರುವುದು ಏಕೆ ಮತ್ತು ಕುವೈತ್ ದಿನಾರ್ ಮೊದಲ ಸ್ಥಾನದಲ್ಲಿ ಏಕೆ ಎಂಬುದರ ಬಗ್ಗೆ ಫೋರ್ಟ್ಸ್ ನಿಯತಕಾಲಿಕ ವಿವರಣೆ ನೀಡಿದೆ. 1960ರಲ್ಲಿ ಕುವೈತ್‌ ದಿನಾರ್ ವಹಿವಾಟು ಶುರು ಮಾಡಿದ ಬಳಿಕ ವಹಿವಾಟಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಜತೆಗೆ ಅದರ ಅರ್ಥ ವ್ಯವಸ್ಥೆಯೂ ಸ್ಥಿರವಾಗಿಯೇ ಮುಂದುವರಿದಿದೆ.* ಸ್ವಿಟ್ಜರ್ಲೆಂಡ್ ಮತ್ತು ಲಿಚ್ಟೆನ್‌ಸ್ಟೈನ್‌ನ ಕರೆನ್ಸಿಯಾದ ಸ್ವಿಸ್ ಫ್ರಾಂಕ್ ಅನ್ನು ವಿಶ್ವದ ಅತ್ಯಂತ ಸ್ಥಿರ ಕರೆನ್ಸಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ ಎಂದು ಫೋರ್ಬ್ಸ್ ಹೇಳಿದೆ.