* ಆಸ್ಟ್ರೇಲಿಯನ್ ಓಪನ್‌ ಪಂದ್ಯಾವಳಿ ಮೆಲ್ಬೋರ್ನ್‌ನಲ್ಲಿ ನಡೆದ 2024ರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತೀಯ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ವಿಶ್ವದ ನಂ. 27  ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು 6-4, 6-2, 7-6 ಸೆಟ್‌ಗಳಿಂದ ಸೋಲಿಸಿದರು.* ಭಾರತದ ಸುಮಿತ್ ನಾಗಲ್ ಎರಡನೇ ಸುತ್ತು ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೈದಿದ್ದಾರೆ. ಜನವರಿ 16 ರಂದು (ಮಂಗಳವಾರ) ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 137ನೇ ವಿಶ್ವ ರ‍್ಯಾಂಕಿಂಗ್‌ ನ ನಾಗಲ್ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ. 31ನೇ ಶ್ರೇಯಾಂಕದ ಬುಬ್ಲಿಕ್ ಅವರನ್ನು ಸೋಲಿಸಿದರು. * 1989ರ ಬಳಿಕ ಗ್ರ್ಯಾನ್ ಸ್ಲಾಮ್ ಪಂದ್ಯವೊಂದರಲ್ಲಿ ಭಾರತೀಯ ಆಟಗಾರರೊಬ್ಬರು ಶ್ರೇಯಾಂಕಿತ ಆಟಗಾರರೊಬ್ಬರನ್ನು ಸೋಲಿಸಿರುವುದು ಇದೇ ಮೊದಲು. 1989 ರಲ್ಲಿ ಎರಡನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿದ್ದರು. ರಮೇಶ್ ಕೃಷ್ಣನ್ ಬಳಿಕ 35 ವರ್ಷಗಳಲ್ಲಿ ಈ ಸಾಧನೆಗೈದ ಮೊದಲ ಭಾರತೀಯನೆಂಬ ಹೆಗ್ಗಳಿಕೆ.* ಸೋಮದೇವ್ ದೇವವರ್ಮನ್ ಅವರು 2013 ರಲ್ಲಿ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿನಲ್ಲಿ ಸ್ಥಾನವನ್ನು ಪಡೆದುಕೊಂಡು ಈ ಮೈಲಿಗಲ್ಲು ಸಾಧಿಸಿದ ಕೊನೆಯ ಭಾರತೀಯರಾಗಿದ್ದರು. 11 ವರ್ಷಗಳ ನಂತರ ಈ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಸುಮಿತ್ ನಗಾಲ್ ಅವರು 35 ವರ್ಷಗಳಲ್ಲಿ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಿದ ದೇಶದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಭಾರತೀಯ ಟೆನಿಸ್‌ಗೆ ಇತಿಹಾಸ ಬರೆದಿದ್ದಾರೆ.