Job Description: * ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯ ಬೆಳವಣಿಗೆ ದರ ಉತ್ತಮವಾಗಿದೆ ಎಂದು ವಿಶ್ವಬ್ಯಾಂಕ್ ಏಪ್ರಿಲ್ 4 ರಂದು ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. * ಅಭಿವೃದ್ಧಿ ದರದ ಕುರಿತಾಗಿ ವಾರ್ಷಿಕ ವರದಿ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್ ಈ ವರ್ಷ ಭಾರತದ ಅಭಿವೃದ್ಧಿ ದರವನ್ನು ಶೇ.6.3ಕ್ಕೆ ಕಡಿತ ಗೊಳಿಸಿದ್ದು, ಈ ಮೊದಲು 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇ.6.6 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿತ್ತು. * ಭಾರತದಲ್ಲಿ ಸಾಲದ ದರ ಹೆಚ್ಚಿರುವ ಕಾರಣ ಉಪಭೋಗದಲ್ಲಿ ಕುಂಠಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ದರವನ್ನು ವಿಶ್ವ ಬ್ಯಾಂಕ್ ಶೇ.6.3 ಕ್ಕೆ ಕಡಿತಗೊಳಿಸಿದೆ. ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ ಎಂದು ವರದಿ ಹೇಳಿದೆ.