Job Description: * ಭಾರತದಲ್ಲಿ ಪ್ರತಿವರ್ಷ ಏಪ್ರಿಲ್ 5 ರಂದು ರಾಷ್ಟ್ರೀಯ ಸಾಗರಯಾನ ದಿನವನ್ನು ಆಚರಿಸಲಾಗುತ್ತದೆ, ಭಾರತದ ಸಿಂಧಿಯಾ ಸ್ಟಿಮ್ ನೇವಿಗೇಷನ್ ಕಂಪೆನಿಯ ಎಸ್ಎಸ್ ಲಾಯಲ್ಟಿ ಹಡಗು ಪ್ರಥಮ ಬಾರಿಗೆ ಬ್ರಿಟನ್ ಗೆ 1919 ಏಪ್ರಿಲ್ 5 ರಂದು ಪ್ರಯಾಣ ಬೆಳೆಸಿತ್ತು 1919 ರವರೆಗೆ ಭಾರತದ ಯಾವ ಹಡಗು ಬೇರೆ ದೇಶಕ್ಕೆ ಪ್ರಯಾಣ ಮಾಡಿರಲಿಲ್ಲ ಹಾಗಾಗಿ ಏಪ್ರಿಲ್ 5 ರಂದು ರಾಷ್ಟ್ರೀಯ ಸಾಗರಯಾನ ದಿನ ಎಂದು ಆಚರಿಸಲಾಗುತ್ತದೆ.* ಭಾರತದ ಶೇ. 90 ರಷ್ಟು ವ್ಯಾಪಾರ ವಹಿವಾಟನ್ನು ಸಮುದ್ರ ಮಾರ್ಗದ ಮೂಲಕ ನಡೆಯುತ್ತಿದ್ದು, ಭಾರತದ ಒಟ್ಟು 182 ಬಂದರುಗಳಿದ್ದು, 7517 ಕಿಲೋ ಮೀಟರ್ ಕರಾವಳಿ ತೀರವನ್ನು ಹೊಂದಿದೆ. ಯುರೋಪಿಯನ್ನರು ಭಾರತದ ಕರಾವಳಿ ಮೂಲಕ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಶುರು ಮಾಡಿದ ನಂತರ ಭಾರತದಲ್ಲಿ ಸಾಗರಯಾನ ಇನ್ನು ಹೆಚ್ಚಾಯಿತು.