Job Description: * ಆರ್ಥಿಕ ಸಹಕಾರ ಸೇರಿದಂತೆ ಇನ್ನಿತರ ಮಹತ್ವದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವುದರೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ದೊರೆ ಜಿಗೆ ಖೇಸರ್ ನಾಂಗೇಲ್ ವಾಂಗ್‌ಚುಕ್ ಅವರೊಂದಿಗೆ ಏಪ್ರಿಲ್ 4 ರಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.* ವಾಂಗ್‌ಚುಕ್ ಅವರು ಏಪ್ರಿಲ್ 3 ರಂದು ಭಾರತಕ್ಕೆ ಭೇಟಿ ನೀಡಿ, ಚೀನಾವು ಭೂತಾನ್‌ನ ರಾಜಧಾನಿ ಥಿಂಪು ಮೇಲೆ ತನ್ನ ಪ್ರಭಾವ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳುವ ಸಲುವಾಗಿ ಭಾರತಕ್ಕೆ ಭೇಟಿ ನೀಡಿ ಚರ್ಚೆ ಮಾಡಲಾಗಿದೆ.* ಕಾರ್ಯತಂತ್ರದ ದೃಷ್ಟಿಯಿಂದ ಭಾರತದ ಪಾಲಿಗೆ ಭೂತಾನ್ ಪ್ರಮುಖ ರಾಷ್ಟ್ರವಾಗಿದೆ.ಈ ಹಿಂದೆ ಭೂತಾನ್ ಗಡಿಯಲ್ಲಿರುವ ಡೋಕ್ಲಾಮ್ ಪ್ರಸ್ಥಭೂಮಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದ ಚೀನಾಕ್ಕೆ ಭಾರತ ನಿರಾಕರಿಸಿದ್ದು, ಭೂತಾನ್ ಮತ್ತು ಭಾರತದ ನಡುವೆ ಸೌಹಾರ್ದತೆ ಬೆಳೆದು, ಭಾರತ ಮತ್ತು ಭೂತಾನ್ ನಡುವಣ ಕಾರ್ಯತಂತ್ರದ ಸಂಬಂಧವು ಮತ್ತಷ್ಟು ಬಲಗೊಂಡಿತ್ತು. ಹಲವು ಸುತ್ತುಗಳ ಮಾತುಕತೆ ಬಳಿಕ ಭಾರತ ಮತ್ತು ಚೀನಾ ನಡುವಣ ಸಂಘರ್ಷವು ಕೊನೆಗೊಂಡಿತ್ತು.