Job Description: * ಸಂಶೋಧಕರು ತಮಿಳುನಾಡಿನ ಕಡಲೂರು ಕರಾವಳಿಯಾಚೆ ಮೋರೆ ಈಲ್ ಎಂಬ ಹೊಸ ತಳಿಯನ್ನು ಪತ್ತೆ ಹಚ್ಚಿದ್ದಾರೆ. ಹೊಸ ತಳಿಗೆ ಗೈಮ್ಮೋಥೈರಾಕ್ಸ್ ತಮಿಳುನಾಡು ಯೆನ್ಸಿಸ್ ಎಂದು ಹೆಸರಿಡಲಾಗಿದ್ದು, ತಮಿಳುನಾಡು ಬ್ರೌನ್ ಮೋರೆ ಎನ್ನುವುದು ಅದರ ಸಾಮಾನ್ಯ ಹೆಸರಾಗಿದೆ. * ಪಿ.ಕೋಟೇಶ್ವರನ್ ಮತ್ತು ಜಿ. ಕಾಂತರಾಜನ್ ಈ ಸಂಶೋಧನೆ ನಡೆಸಿದ ತಜ್ಞರಾಗಿದ್ದಾರೆ. ಕಡಲೂರು ಜಿಲ್ಲೆಯ ಕರಾವಳಿ ನೀರಿನಲ್ಲಿ ಶೋಧ ನಡೆಸುತ್ತಿದ್ದಾಗ ಹೊಸ ತಳಿಯನ್ನು ಕಂಡುಹಿಡಿದಿದ್ದಾರೆ. * ಭಾರತೀಯ ಜಲ ಸಂಶೋಧನೆಯಲ್ಲಿ ಕಂಡುಬರುವ ತಳಿಗಳಿಗಿಂತ ಮೋರೆ ಈಲ್ ವಿಭಿನ್ನವಾಗಿದೆ, ಇದರ ತಲೆಯ ಮೇಲೆ ಚಿಕ್ಕ ಚುಕ್ಕಿಗಳ ಸರಣಿ ಪಟ್ಟಿಗಳಿವೆ, ದೇಹದ ಮಧ್ಯ - ರೇಖೆಯಲ್ಲಿ ಕಪ್ಪು ಕಲೆಗಳ ಒಂದು ಪಟ್ಟಿ ಇದೆ. ಒಟ್ಟು 272 ರಿಂದ 487 ಮಿಲಿಮೀಟರ್ ಉದ್ದದ ನಾಲ್ಕು ಮಾದರಿಗಳನ್ನು ಫಿಶ್ ಲ್ಯಾಂಡಿಂಗ್ ಕೇಂದ್ರದಿಂದ ಸುಮಾರು 25 ರಿಂದ 30 ಮೀಟರ್ ಆಳದಿಂದ ಸಂಗ್ರಹಿಸಲಾಗಿದೆ.