* ಪ್ರತಿವರ್ಷ ಡಿಸೆಂಬರ್‌ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.*  ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳ ಹೋರಾಟ ನಡೆಸಬಹುದು ಆದರಿಂದ ಗ್ರಹರು ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.* ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು 1986 ರಲ್ಲಿ ಅನುಮೋದಿಸಲಾಯಿತು ಮತ್ತು ಡಿಸೆಂಬರ್ 24, 1986 ರಂದು ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆಯಿತು. ಅಂದಿನಿಂದ, ಈ ಅನುಮೋದನೆ ಪಡೆದ ಸಂದರ್ಭವನ್ನು ಗೌರವಿಸಲು  ಈ ದಿನವನ್ನು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವಾಗಿ ಸ್ಥಾಪಿಸಲಾಗಿದೆ.* ಕಾಯಿದೆಯ ಪ್ರಮುಖ ಅಂಶಗಳು :- ಇದು ಯಾವುದೇ ಬಗೆಯ ಗ್ರಾಹಕ ದೂರುಗಳ ತ್ವರಿತ ವಿಚಾರಣೆ ಮತ್ತು ವ್ಯಾಜ್ಯಗಳ ತ್ವರಿತ ಹಾಗೂ ಮಿತವೆಚ್ಚದಲ್ಲಿ ಅವುಗಳ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡುತ್ತದೆ. ಜತೆಗೆ ಗ್ರಾಹಕರಿಗೆ ನಿರ್ದಿಷ್ಠ ಪರಿಹಾರಗಳನ್ನು ಕೂಡಾ ದೊರಕಿಸಿಕೊಡಲು ಸಹಕಾರಿಯಾಗಿದೆ.- ಈ ಕಾಯ್ದೆಯು ಗ್ರಾಹಕರ ಹಕ್ಕುಗಳು ಎಂದು ವಿಶ್ವಸಂಸ್ಥೆಯಿಂದ ಪರಿಗಣಿಸಲ್ಪಡುವ ಎಂಟು ಹಕ್ಕುಗಳ ಪೈಕಿ ಆರನ್ನು ಗುರುತಿಸಿದೆ.* ಗ್ರಾಹಕರ ಹಿತಾರಕ್ಷ ಣಾ ಕಾಯಿದೆ, 1986 ರ ಪ್ರಕಾರ ಶೋಷಿತ ಗ್ರಾಹಕನಿಗೆ ಕೆಳಕಂಡ ಪರಿಹಾರಗಳು ದೊರೆಯುತ್ತವೆ. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸಿಕೊಳ್ಳುವ, ಬದಲಿ ಸರಕನ್ನು ನೀಡುವಂತೆ, ಸರಕಿನ ಮೌಲ್ಯವನ್ನು ವಾಪಸ್ಸು ಪಡೆಯುವ, ನಷ್ಟ ಪರಿಹಾರವನ್ನು ಪಡೆಯುವ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವ, ಹಾನಿಕಾರಕ ಸರಕುಗಳನ್ನು ಮಾರಾಟ ಮಾಡುದಂತೆ ನಿರ್ಬಂಧ ಹೇರುವ,ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ನೀಡುತ್ತದೆ.