* ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ (Miss Karnataka) ಕಿರೀಟವನ್ನು ಕವಿತಾ ವೀರೇಂದ್ರ  ತಮ್ಮದಾಗಿಸಿಕೊಂಡಿದ್ದಾರೆ.* ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ, ಪ್ರಿಯಾಂಕ ರಿಯಾ ಫಸ್ಟ್ ರನ್ನರ್ ಅಪ್ ಆದರೂ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. * ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ ರೂಪದರ್ಶಿಗಳಿಗೆ ಪ್ರೋತ್ಸಾಹ ಕೊಟ್ಟರು.* ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಧುಬಾಲ ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು.* ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಈ ಬ್ಯೂಟಿ ಪೇಜೆಂಟ್ ನಲ್ಲಿ ಡೈರೆಕ್ಟರ್ಸ್ ಆಗಿ ಪಲ್ಲವಿ ಗೌಡ, ಚೈತ್ರಾ ಗೌಡ, ಆರ್ ಜೆ ರಾಜೇಶ್, ಮನೋಜ್ ಕುಮಾರ್ ಹಾಗೂ ಪ್ರಿಯಾ ಗೌತಮ್ ಇದ್ದರು.