Job Description: * ಸಾಹಸಸಿಂಹ, ಅಭಿನಯ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಕನ್ನಡಿಗರ ಅಚ್ಚುಮೆಚ್ಚಿನ ಚಲನಚಿತ್ರ ನಟ ದಿವಂಗತ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನು ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಳಾಲು ಗ್ರಾಮದಲ್ಲಿ ನಿರ್ಮಿಸಲಾಗಿದೆ.* ವಿಷ್ಣುವರ್ಧನ್ ರವರ ಸ್ಮಾರಕವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿದರು. ಸ್ಮಾರಕ ಲೋಕಾರ್ಪಣೆಯಲ್ಲಿ ವಿಷ್ಣುವರ್ಧನ್ ರವರ ಕುಟುಂಬ ಹಾಗೂ ಅವರ ಜೊತೆ ಚಲನಚಿತ್ರದಲ್ಲಿ ನಟಿಸಿರುವ ಸಹಕಲಾವಿದರು ಉಪಸ್ಥಿತರಿದ್ದರು.* ಡಾ.ವಿಷ್ಣುವರ್ಧನ್ ರವರ ಸ್ಮಾರಕ 6.5 ಅಡಿ ಎತ್ತರವಾಗಿದ್ದು, ಸ್ಮಾರಕ ಕಟ್ಟಡದ ವಿಸ್ತೀರ್ಣ : 27 ಸಾವಿರ ಚದರ ಅಡಿ, 5 ಎಕರೆಯ ವಿಶಾಲವಾದ ಜಾಗ, 700 ಫೋಟೋಗಳ ಗ್ಯಾಲರಿ, ನೀರಿನ ಕಾರಂಜಿ, 240 ಆಸನಗಳ ಸುಸಜ್ಜಿತ ಸಂಭಾಂಗಣ, ವಿಶಾಲವಾದ ಉದ್ಯಾನ, ಭೂದೃಶ್ಯ, ಕಲಿಕಾ ಕೇಂದ್ರ, ತರಬೇತಿ ಕೊಠಡಿ ಹಾಗೂ ಒಟ್ಟು ಒಳಮಹಡಿ, ನೆಲಮಹಡಿ ಎಂಬ ಎರಡು ಬಗೆಯ ಮಹಡಿಗಳು ಇವೆಲ್ಲವೂ ಇವೆ.