* ಅರ್ಜೆಂಟೀನಾ ತಂಡ ಸತತ ಎರಡನೇ ಬಾರಿಗೆ ಕೋಪಾ ಅಮೆರಿಕ ಚಾಂಪಿಯನ್ ಎನಿಸಿದೆ. ಇದರೊಂದಿಗೆ ದಾಖಲೆಯ 16ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. * ಜುಲೈ 15 ರಂದು (ಸೋಮವಾರ) ನಡೆದ ಫೈನಲ್ ಪಂದ್ಯದಲ್ಲಿ ಲೌಟರೊ ಮಾರ್ಟಿನೆಜ್ (112ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ಬಲದಿಂದ ಅರ್ಜೆಂಟೀನಾ 1-0 ಗೋಲುಗಳ ಅಂತರದಿಂದ ಕೊಲಂಬಿಯಾ ಅನ್ನು ಹಿಂದಿಕ್ಕಿದೆ.* ಲಿಯೋನೆಲ್ ಮೆಸ್ಸಿ ಕೋಪಾ ಅಮೆರಿಕ ಟೂರ್ನಿಗೆ ಗೆಲುವಿನ ವಿದಾಯ ತಿಳಿಸಿದ್ದಾರೆ.* ಪ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಕೋಪಾ ಅಮೆರಿಕ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರ್ಜೆಂಟಿನಾ ತಂಡವು ಕೊಲಂಬಿಯಾ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಸತತ ಮೂರು ಟ್ರೋಫಿ ಗೆದ್ದ ದಾಖಲೆ ಬರೆದಿದೆ. * ಅರ್ಜೆಂಟೀನಾ ತಂಡವು ಸತತ 2021ರ ಕೋಪಾ ಅಮೆರಿಕ, 2022ರ ಫಿಫಾ ವಿಶ್ವಕಪ್ ಹಾಗೂ 2024ರ ಕೊಪಾ ಅಮೆರಿಕ ಟ್ರೋಫಿ ಗೆದ್ದಿದೆ.* ಅರ್ಜೆಂಟೀನಾ ತಂಡ ಗೆದ್ದ ಬಹುಮಾನ : 133.66 ಕೋಟಿ * ಕೊಲಂಬಿಯಾ ತಂಡ ಗೆದ್ದ ಬಹುಮಾನ : 58.47 ಕೋಟಿ * ಹೆಚ್ಚು ಬಾರಿ ಕೊಪಾ ಪ್ರಶಸ್ತಿ ಗೆದ್ದವರುಅರ್ಜೆಂಟೀನಾ ಪ್ರಶಸ್ತಿಗಳು 16ಉರುಗೈ ಪ್ರಶಸ್ತಿಗಳು 15ಬ್ರೆಜಿಲ್ ಪ್ರಶಸ್ತಿಗಳು 9ಚಿಲಿ ಪ್ರಶಸ್ತಿಗಳು 2ಪೆಗುಗ್ವೆ ಪ್ರಶಸ್ತಿಗಳು 2ಪೆರು ಪ್ರಶಸ್ತಿಗಳು 2