* ಈ ವರ್ಷದ 6 ತಿಂಗಳಲ್ಲಿ 12 ರಾಜ್ಯಗಳಲ್ಲಿ 75 ಹುಲಿಗಳು ಸಾವನ್ನಪಿವೆ. ಕರ್ನಾಟಕದಲ್ಲಿ 11 ಹುಲಿಗಳು ಸಾವನ್ನಪ್ಪಿದ್ದು, ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆ ಒಂದು ಕಡಿಮೆಯಾಗಿದೆ.* ಇತ್ತೀಚಿಗೆ ಬಿಡುಗಡೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ-ಅಂಶಗಳ ಪ್ರಕಾರ ಈ ವರ್ಷದ ಜನವರಿಯಿಂದ ದೇಶದಲ್ಲಿ 74 ಹುಲಿಗಳು ಸಾವನ್ನಪ್ಪಿದ್ದು, ಅದರಲ್ಲಿ 11 ಸಾವುಗಳು ಕರ್ನಾಟಕದಲ್ಲಿ ದಾಖಲಾಗಿವೆ. ಮಧ್ಯ ಪ್ರದೇಶದಲ್ಲಿ 23, ಮಹಾರಾಷ್ಟ್ರದಲ್ಲಿ 14 ಹುಲಿಗಳು ಸಾವನ್ನಪ್ಪಿವೆ.* ಅರಣೀಕರಣ, ವನ್ಯಜೀವಿ ಆವಾಸತಾಣ ನಿರ್ವಹಣೆ, ಮಾನವ- ವನ್ಯಜೀವಿ ಸಂಘರ್ಷ ತಡೆಯುವುದು ಸೇರಿದಂತೆ ಅರಣ್ಯ ಇಲಾಖೆಗೆ ಅಗತ್ಯವಿರುವ ಹೆಚ್ಚುವರಿ ಹಣಕಾಸು ಬೇಡಿಕೆ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.