Job Description: * ಪ್ರಸ್ತುತ ಕೀವ್‌ ನಗರವು ಉಕ್ರೇನ್‌ ರಾಷ್ಟ್ರದ ಅತ್ಯಂತ ಸುಂದರ ನಗರವಾಗಿದೆ. ಈ ಹಿಂದೆ ಸುಮಾರು '01' ಸಾವಿರ ವರ್ಷಗಳ ಹಿಂದೆಯೇ ಈ ನಗರವನ್ನು ಮದರ್‌ ಆಫ್ ರಸ್‌ ಸಿಟೀಸ್‌ ಎನ್ನಲಾಗುತ್ತಿತ್ತು. ಈ ಹಿಂದೆ ಈ ನಗರಕ್ಕೆ 2 ನೇ ಮಹಾಯುದ್ಧದ ಸಂಧರ್ಭದಲ್ಲಿ ಆಪಾರ ಪ್ರಮಾಣದ ಹಾನಿಯಾಗಿತ್ತು. * ಮತ್ತೇ ಈ ನಗರವು 1950 ರ ಹೊತ್ತಿಗೆ ಅತ್ಯಂತ ಸುಸಜ್ಜಿತ ಹಾಗೂ ಅಭಿವೃದ್ಧಿ ಹೊಂದಿದ ನಗರವಾಗಿ ಪ್ರಖ್ಯಾತಿ ಪಡೆದುಕೊಂಡಿದೆ. 2 ನೇ ಮಹಾಯುದ್ಧದ ಬಳಿಕವೇ ಈ ನಗರವನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ ಹಾಗೂ ಹಳೆಯ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿ ಕೊಳ್ಳಲಾಗಿದೆ. * ಪ್ರಸ್ತುತ ಉಕ್ರೇನ್‌ ರಾಜಧಾನಿಯಾಗಿರುವ ಕೀವ್‌ ನಗರದಲ್ಲಿ ಯಾವುದೇ ಕೈಗಾರಿಕೆಗಳಿಗೆ ಕೊರತೆ ಇಲ್ಲ. ಉಕ್ಕು, ಕಬ್ಬಿಣ ಕಾರ್ಖಾನೆಗಳು, ರಸಗೊಬ್ಬರ, ಮೆಷಿನರಿ, ಕೆಮಿಕಲ್‌ ವರ್ಕ್‌, ರಬ್ಬರ್‌ ಸೇರಿ ಅನೇಕ ರೀತಿಯ ಉತ್ಪಾದನ ಕಾರ್ಖಾನೆಗಳು ಈ ನಗರದಲ್ಲಿವೆ. ಹಾಗೂ ಈ ನಗರವು ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಹಾಗೂ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯೂ ಉತ್ತಮವಾಗಿದೆ, ಇವೆಲ್ಲದರ ಜೊತೆಗೆ ತನ್ನ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಇತಿಹಾಸವನ್ನು ಮಾಹಿತಿಯನ್ನು ಹೇಳಲಾಗುತ್ತಿದೆ. * ಈ ಹಿಂದೆ 1941 ರ ಸೆಪ್ಟೆಂಬರ್.19 ರಂದು ಉಕ್ರೇನಿನ ಈ ನಗರಕ್ಕೆ ಹಿಟ್ಲರ್‌ ಪಡೆ ಆಗಮಿಸಿದ ಕೆಲವೇ ದಿನಗಳಲ್ಲಿ 34 ಸಾವಿರ ಯಹೂದಿಗಳನ್ನು ಹಿಟ್ಲರ್‌ ಪಡೆಯು ನಾಜಿಗಳು ಹತ್ಯೆ ಮಾಡಿದ್ದರು. ನಂತರದ '2' ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಯಹೂದಿಗಳು, ರೋಮಾ ಹಾಗೂ ಇತರ ಉಕ್ರೇನಿ ಪ್ರಜೆಗಳನ್ನು ಹಿಟ್ಲರ್‌ ಪಡೆಯ ನಾಜಿಗಳು ಹತ್ಯೆ ಮಾಡಿದ್ದರು. ನಂತರ ಈ ಹಿಟ್ಲರ್‌ ಪಡೆಯನ್ನು ರಷ್ಯಾ ಸೇನೆಯು 1943 ರ ನವೆಂಬರ್. 06ರಂದು ಜರ್ಮನ್‌ ಸೈನಿಕರನ್ನು ಇಲ್ಲಿಂದ ಓಡಿಸಿತು. ಆದರೆ ಇದೀಗ ರಷ್ಯಾ ರಾಷ್ಟ್ರವೇ ಉಕ್ರೇನಿನ ನಗರದ ಮೇಲೆ ದಾಳಿಯನ್ನು ಮಾಡುತ್ತಿದ್ದೆ. * ಕೈವ್ ಅಥವಾ ಕೀವ್ ಉಕ್ರೇನಿಯನ್ ರಾಜಧಾನಿಯಾಗಿದೆ. ಈ ನಗರವು ಡ್ನೀಪರ್ ನದಿಯ ಉದ್ದಕ್ಕೂ ಉತ್ತರ-ಮಧ್ಯ ಉಕ್ರೇನ್‌ನಲ್ಲಿದೆ. ಕೈವ್ ನಗರವು ಯುರೋಪ್‌ನಲ್ಲಿ 7ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. * ಕೈವ್ ನಗರವು ಪೂರ್ವ ಯುರೋಪಿನ ಪ್ರಮುಖ ಕೈಗಾರಿಕಾ, ವೈಜ್ಞಾನಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಅಷ್ಟೇ ಅಲ್ಲದೇ ಅನೇಕ ಹೈಟೆಕ್ ಕೈಗಾರಿಕೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಐತಿಹಾಸಿಕಕ್ಕೆ ನೆಲೆಯಾಗಿದೆ. * ಈ ಹಿಂದೆ 1918 ರಲ್ಲಿ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಸೋವಿಯತ್ ರಷ್ಯಾ ರಾಷ್ಟ್ರದಿಂದ ಸ್ವಾತಂತ್ರ್ಯವನ್ನು ಘೋಷಣೆ ಮಾಡಿಕೊಂಡಿದೆ. ಕೈವ್ ಉಕ್ರೇನಿನ ರಾಜಧಾನಿಯಾಗಿದೆ. 2ನೇ ಮಹಾಯುದ್ಧದ ಸಮಯದಲ್ಲಿ ಈ ನಗರವು ಸಂಪೂರ್ಣವಾಗಿ ನಾಶವಾಯಿತು, ಹಾಗೂ ಅಷ್ಟೇ ಬೇಗನೆ ಬೆಳೆದಿರುವ ಸೋವಿಯತ್ ಒಕ್ಕೂಟದ 3 ನೇ-ಅತಿದೊಡ್ಡ ನಗರವಾಗಿದೆ.