Job Description: * ಪ್ರಸ್ತುತ ಭಾರತೀಯ ನಿಖತ್ ಝರೀನ್ ಅವರು ಸ್ಟ್ರಾಂಡ್ಜಾ ಸ್ಮಾರಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಇವರು ಭಾರತದ ತೆಲಂಗಾಣ ಬಾಕ್ಸರ್ ಆಗಿದ್ದಾರೆ. * ಇತ್ತೀಚಿಗೆ ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಕೊನೆಗೊಂಡಿರುವ ಟೂರ್ನಿಯಲ್ಲಿ ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯವರಾದ ನಿಖತ್ ಅವರು 52 ಕೆ.ಜಿ. ವಿಭಾಗದ ಫೈನಲ್‌ ಹಂತದಲ್ಲಿ 4-1 ರ ಅಂತರದಲ್ಲಿ ಉಕ್ರೇನ್‌ ನ ಟೆಟಿಯಾನಾ ಕೊಬೆ ಬಾಕ್ಸರ್ ಅವರನ್ನು ಸೋಲಿಸಿದ್ದಾರೆ. ಸ್ಟ್ರಾಂಡ್ಜಾ ಪಂದ್ಯಾವಳಿಯಲ್ಲಿ '2' ಚಿನ್ನದ ಪದಕಗಳನ್ನು ಜಯಿಸಿರುವ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. * ತೆಲಂಗಾಣ ಬಾಕ್ಸರ್ ನಿಖತ್ ಝರೀನ್ ಅವರು ಈ ಹಿಂದೆ 2019 ರಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಭಾರತವು ಇದೇ ಟೂರ್ನಿಯಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತೂ ಅವರು ಚಿನ್ನದ ಪದಕ ಗೆದಿದ್ದಾರೆ. ಬಾಕ್ಸರ್ ನಿಖತ್ ಝರೀನ್ ಅವರನ್ನು ತೆಲಂಗಾಣ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಅಲ್ಲಿಪುರಂ ವೆಂಕಟೇಶ್ವರ ರೆಡ್ಡಿ ಅವರು ಅಭಿನಂದಿಸಿದ್ದಾರೆ. * ಸ್ಟ್ರಾಂಡ್ಜಾ ಕಪ್ ಇದನ್ನು ಅಧಿಕೃತವಾಗಿ ಸ್ಟ್ರಾಂಡ್ಜಾ ಸ್ಮಾರಕ ಎನ್ನಲಾಗುತ್ತದೆ. ಈ ಕಪ್ ಬಲ್ಗೇರಿಯಾದಲ್ಲಿ ವಾರ್ಷಿಕವಾಗಿ ನಡೆಯುವ ಅಂತರರಾಷ್ಟ್ರೀಯ ಹವ್ಯಾಸಿ ಬಾಕ್ಸಿಂಗ್ ಪಂದ್ಯಾವಳಿಯಾಗಿದೆ. ಸ್ಟ್ರಾಂಡ್ಜಾ ಕಪ್ ಇದೊಂದು ಯುರೋಪ್‌ನ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಾಗಿದೆ. ಈ ಹಿಂದೆ 1950 ರಲ್ಲಿ ಈ ಸ್ಟ್ರಾಂಡ್ಜಾ ಕಪ್'ನ ಮೊದಲ ಪಂದ್ಯಾವಳಿಯನ್ನು ಸೋಫಿಯಾದ 'ಯುನಾಕ್' ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಬಾಕ್ಸರ್‌ಗೆ ಟ್ರೋಫಿಯನ್ನು ನೀಡಿ ಗೌರವಿಸಲಾಗುತ್ತದೆ. ಇದರ ಮೊದಲ ಕಪ್ ನ್ನು 1931 ರಲ್ಲಿ ಜನಿಸಿದ ಹ್ರಿಸ್ಟೊ ಪೊಪೊವ್ ಅವರಿಗೆ ನೀಡಿ ಗೌರವಿಸಲಾಗಿದೆ.