Job Description: * ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ಚಾಲನೆ ನೀಡಿದ್ದಾರೆ. '5' ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. * ಆರೋಗ್ಯವಂತ ಭಾರತ ನಿರ್ಮಾಣವಾಗಲು ಹಾಗೂ ಮಕ್ಕಳು ಆರೋಗ್ಯವಂತರಾಗಿರಲು ಪಲ್ಸ್‌ ಪೋಲಿಯೋ ಅವಶ್ಯಕತೆ ಇದೆ. * ಪಲ್ಸ್ ಪೋಲಿಯೊವು ಭಾರತದಲ್ಲಿ ಪೋಲಿಯೊವನ್ನು ತಗೆದುಹಾಕಲು ಭಾರತ ಸರ್ಕಾರವು ಸ್ಥಾಪಿಸಿರುವ ಪ್ರತಿರಕ್ಷಣೆ ಅಭಿಯಾನವಾಗಿದೆ, ಪೋಲಿಯೊ ವೈರಸ್ ವಿರುದ್ಧ '5' ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಲಾಗುತ್ತದೆ. ಈ ಯೋಜನೆಯು ನಾಡಿ ಲಸಿಕೆ ಕಾರ್ಯಕ್ರಮ ಹಾಗೂ ಪೋಲಿಯೊ ಮೈಲಿಟಿಸ್ ಪ್ರಕರಣಗಳಿಗೆ ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಪೋಲಿಯೊ ವಿರುದ್ಧ ಹೋರಾಡುತ್ತದೆ * ಈ ಹಿಂದೆ 1985 ರಲ್ಲಿ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ(UIP)ನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ಪೋಲಿಯೊ ಪ್ರಕರಣಗಳ ಸಂಖ್ಯೆಯು 1987 ರಲ್ಲಿ ಸಾವಿರದಿಂದ ಮತ್ತೇ 2010 ರಲ್ಲಿ 42 ಕ್ಕೆ ಇಳಿದಿದೆ. * ವಿಶ್ವ ಆರೋಗ್ಯ ಸಂಸ್ಥೆಯ 1995 ರಲ್ಲಿ ಜಾಗತಿಕ ಪೋಲಿಯೊ ನಿರ್ಮೂಲನೆ ಉಪಕ್ರಮವನ್ನು ಅನುಸರಿಸಿ, ಭಾರತವು 100% ವ್ಯಾಪ್ತಿಯನ್ನು ಗುರಿಯಾಗಿಸಿ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದ ಜೊತೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಆರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು 2014 ರ ಮಾರ್ಚ್. 27 ರಂದು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಣೆ ಮಾಡಿದೆ. * ಪ್ರಸ್ತುತ ದೆಹಲಿ ಸರ್ಕಾರವು ಪೋಲಿಯೊ ಭಾನುವಾರ ಎಂಬ ಮಾಸಿಕ ಪಲ್ಸ್ ಪೋಲಿಯೊ ಅಭಿಯಾನವನ್ನು ಆಯೋಜಿಸುತ್ತದೆ.