Job Description: * ಪ್ರಸ್ತುತ ಕೇಂದ್ರ ಸರ್ಕಾರವು ಮಾಧಬಿ ಪುರಿ ಬುಚ್ ಅವರನ್ನು '3' ವರ್ಷದ ಅವಧಿಗೆ ಭಾರತದ ಭದ್ರತೆ ಹಾಗೂ ವಿನಿಮಯ ಮಂಡಳಿ (Securities and Exchange Board of India (SEBI)) ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಮಾಧಬಿ ಪುರಿ ಬುಚ್ ಅವರು ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರು ಕೂಡ ಆಗಿದ್ದಾರೆ. * ಇಲ್ಲಿಯವರೆಗೆ ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ ಅವರ ಅಧಿಕಾರ ಅವಧಿಯು ಕೊನೆಗೊಂಡಿರುವ ಹಿನ್ನಲೆಯಿಂದಾಗಿ ಬುಚ್ ಅವರನ್ನು ಸೆಬಿ'ನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥರಾಗಿ ನೇಮಿಸಲಾಗಿದೆ ಎಂದು ಹಣಕಾಸು ಸಚಿವಾಲಯ ವರದಿ ಮಾಡಿದೆ. * ಮಾಧಬಿ ಪುರಿ ಬುಚ್ ಅವರನ್ನು ಮಾರುಕಟ್ಟೆ ನಿಯಂತ್ರಕದಿಂದ ಸ್ಥಾಪನೆ ಮಾಡಲಾಗಿರುವ ಹೊಸ ತಂತ್ರಜ್ಞಾನ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ಈ ಹಿಂದೆಯು ಕೂಡ ಅವರ ಹೆಸರನ್ನು ನಿರ್ದೇಶಿಸಲಾಗಿತ್ತು. * ಬುಚ್ ಅವರು ICC ಬ್ಯಾಂಕ್ ನ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ. ಇವರು ಈ ಹಿಂದೆ 2009 ರ ಫೆಬ್ರವರಿ ಯಿಂದ 2011 ರ ಮೇ ವರೆಗೆ ICCI ಸೆಕ್ಯುರಿಟೀಸ್ ನ MD ಹಾಗೂ CEO ಆಗಿ ಕಾರ್ಯ ನಿರ್ವಹಿಸಿದ್ದಾರೆ. * * Securities and Exchange Board of India (SEBI) : ಇದೊಂದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಬರುವ ಭಾರತದಲ್ಲಿನ ಭದ್ರತೆಗಳು ಹಾಗೂ ಸರಕು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿದೆ. ಈ ಸಮಸ್ತೆಯನ್ನು ಈ ಹಿಂದೆ 1988 ರ ಏಪ್ರಿಲ್. 12 ರಂದು ಸ್ಥಾಪನೆ ಮಾಡಲಾಗಿದೆ, ಹಾಗೂ ಈ ಸಂಸ್ಥೆಗೆ 1992 ರ SEBI ಕಾಯಿದೆಯ ಅನ್ವಯ 1992 ರ ಜನವರಿ. 30 ರಂದು ಶಾಸನಬದ್ಧ ಅಧಿಕಾರವನ್ನು ಕಲ್ಪಿಸಲಾಗಿದೆ. * ಸೆಬಿ(SEBI)ಯು ಪ್ರಧಾನ ಕಛೇರಿಯ ಮುಂಬೈ ನಗರದಲ್ಲಿದೆ, ಹಾಗೂ ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ ಅವುಗಳು ಕ್ರಮವಾಗಿ ನವದೆಹಲಿ, ಕೋಲ್ಕತ್ತಾ, ಚೆನ್ನೈ ಹಾಗೂ ಅಹಮದಾಬಾದ್‌ ನಗರಗಳಾಗಿವೆ. ಸೆಬಿಯು ಇವುಗಳ ಜೊತೆಗೆ ರಾಜಸ್ಥಾನ್'ದ ಜೈಪುರ ಹಾಗೂ ಕರ್ನಾಟಕದ ಬೆಂಗಳೂರಿನಲ್ಲಿ ಸ್ಥಳೀಯ ಕಚೇರಿಗಳನ್ನು ಆರಂಭಿಸಿದೆ. ಇದಾದ ಬಳಿಕ 2013-2014 ರ ಹಣಕಾಸು ವರ್ಷದಲ್ಲಿ ಗುವಾಹಟಿ, ಭುವನೇಶ್ವರ್, ಪಾಟ್ನಾ, ಕೊಚ್ಚಿ ಮತ್ತು ಚಂಡೀಗಢದಲ್ಲಿ ತನ್ನ ಕಚೇರಿಗಳನ್ನು ಆರಂಭಿಸಿದೆ. * SEBI ಅನ್ನು ಅದರ ಸದಸ್ಯರು ನಿರ್ವಹಿಸುತ್ತಾರೆ: - ಭಾರತ ಕೇಂದ್ರ ಸರ್ಕಾರವು ಸೆಬಿನ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುತ್ತದೆ. - ಕೇಂದ್ರ ಹಣಕಾಸು ಸಚಿವಾಲಯದ ಇಬ್ಬರು ಅಧಿಕಾರಿಗಳು. - RBI ದಿಂದ ಒಬ್ಬ ಸದಸ್ಯ. - ಭಾರತೀಯ ಕೇಂದ್ರ ಸರ್ಕಾರವು ಇನ್ನಉಳಿದ '5' ಸದಸ್ಯರನ್ನು ನಾಮನಿರ್ದೇಶನ ಮಾಡುತ್ತದೆ, ಆ '5' ಸದಸ್ಯರಲ್ಲಿ ಕನಿಷ್ಠ ಪಕ್ಷ '3' ಸದಸ್ಯರು ಪೂರ್ಣ ಸಮಯದ ಸದಸ್ಯರಾಗಿರಬೇಕು ಎಂದು ತಿಳಿಸಿದೆ.