Job Description: * ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು '3' ದಿನಗಳ ಅಸ್ಸಾಂ ಪ್ರವಾಸದಲ್ಲಿ ಅಸ್ಸಾಂ ರಾಜ್ಯದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸವಾರಿಯನ್ನು ಮಾಡಿದರು. * ರಾಷ್ಟ್ರಪತಿ ಅವರು ಅಸ್ಸಾಂ ತೇಜ್‌ಪುರ ವಿಶ್ವವಿದ್ಯಾಲಯದ 19 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ರಾಜ್ಯದ ಕಾಜಿರಂಗ ಉದ್ಯಾನವನವನ್ನು ವೀಕ್ಷಿಸಿದರು. ನಂತರ ಕೋಹೋರಾದಲ್ಲಿ ನಡೆಯಲಿರುವ ಅರಣ್ಯಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಪಾಲ್ಗೊಳ್ಳಲಿದ್ದಾರೆ. * ಪ್ರಸ್ತುತ ಈ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಭಾರತದ ಅಸ್ಸಾಂ ರಾಜ್ಯದ ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಹಾಗೂ ನಾಗಾನ್ ಜಿಲ್ಲೆಗಳಲ್ಲಿನ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ವಿಶ್ವದ 3ನೇ ಎರಡರಷ್ಟು ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳನ್ನು ಹೊಂದಿದೆ. ಹಾಗೂ ಈ ಅಭಯಾರಣ್ಯವು ವಿಶ್ವ ಪರಂಪರೆಯ ತಾಣವಾಗಿದೆ. * ಈ ಹಿಂದೆ 2018 ರ ಮಾರ್ಚ್ ನಲ್ಲಿ ಅಸ್ಸಾಂ ಸರ್ಕಾರದ ಅರಣ್ಯ ಇಲಾಖೆ ಹಾಗೂ ಕೆಲವು ಮಾನ್ಯತೆ ಪಡೆದ ವನ್ಯಜೀವಿ ಎನ್‌ಜಿಒಗಳು ಜಂಟಿಯಾಗಿ ಕೈಗೊಂಡಿರುವ ಜನಗಣತಿಯ ಪ್ರಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಸುಮಾರು 2,413 ಘೇಂಡಾಮೃಗಗಳನ್ನು ಹೊಂದಿದೆ. * ಕಾಜಿರಂಗ ಉದ್ಯಾನವನವು ಪ್ರಪಂಚದ ಸಂರಕ್ಷಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಹುಲಿಗಳ ಸಾಂದ್ರತೆಗೆ ನೆಲೆಯಾಗಿದೆ, ಈ ಹಿಂದೆ 2006 ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಹಾಗೂ ಈ ಉದ್ಯಾನವನವು ಆನೆಗಳು, ಕಾಡು ನೀರಿನ ಎಮ್ಮೆಗಳು ಹಾಗೂ ಜೌಗು ಜಿಂಕೆಗಳ ದೊಡ್ಡ ಸಂತಾನೋತ್ಪತ್ತಿ ಜನಸಂಖ್ಯೆಗೆ ಉತ್ತಮವಾದ ನೆಲೆಯಾಗಿದೆ. * ಪಕ್ಷಿಸಂಕುಲದ ಸಂರಕ್ಷಣೆಗಾಗಿ ಬರ್ಡ್‌ಲೈಫ್ ಇಂಟರ್‌ನ್ಯಾಶನಲ್‌ ವತಿಯಿಂದ ಕಾಜಿರಂಗವನ್ನು ಪ್ರಮುಖ ಪಕ್ಷಿ ಪ್ರದೇಶ ಎಂದು ಗುರುತಿಸಲಾಗಿದೆ. ಇದೀಗ ಭಾರತದಲ್ಲಿನ ಇತರ ಸಂರಕ್ಷಿತ ಪ್ರದೇಶಗಳಿಗೆ ಹೊಂದಾಣಿಕೆ ಮಾಡಿ ನೋಡಿದರೆ ಕಾಜಿರಂಗವು ವನ್ಯಜೀವಿ ಸಂರಕ್ಷಣೆಯಲ್ಲಿ ಉತ್ತಮವಾದ ಯಶಸ್ಸನ್ನು ಕಂಡಿದೆ. * ಈ ಕಾಜಿರಂಗ ಉದ್ಯಾನವನವು 1905 ರಲ್ಲಿ ಮೀಸಲು ಅರಣ್ಯವಾಗಿ ಸ್ಥಾಪನೆಯಾದ ಬಳಿಕ 2005 ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿದೆ.