Job Description: * ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಾಹಿತಿಯ ಪ್ರಕಾರ 2014 ರ ನಂತರ ಸುಮಾರು 200 ಬೆಲೆಬಾಳುವ ವಿಗ್ರಹಗಳನ್ನು ವಿದೇಶದಿಂದ ಭಾರತಕ್ಕೆ ಮರಳಿ ತರಲಾಗಿದೆ ಎಂದಿದ್ದಾರೆ. * ಭಾರತವು ಇದೇ ತಿಂಗಳಿನ ಆರಂಭದಲ್ಲಿ ಇಟಲಿ ದೇಶದಿಂದ ತನ್ನ ಅಮೂಲ್ಯವಾದ ಪರಂಪರೆಯನ್ನು ಒಳಗೊಂಡಿರುವ ವಿಗ್ರಹವೊಂದನ್ನು ಮರಳಿ ತಂದಿದೆ. ಈ ವಿಗ್ರಹವು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯ ಅವಲೋಕಿತೇಶ್ವರ ಪದ್ಮಪಾಣಿಯ ವಿಗ್ರಹವಾಗಿದೆ. ಹಲವು ವರ್ಷಗಳ ಹಿಂದೆ ಈ ವಿಗ್ರಹವನ್ನು ಬಿಹಾರ ರಾಜ್ಯದ ಕುಂದಲ್‌ಪುರ ದೇಗುಲದಿಂದ ಕದ್ದು ಬೇರೆ ದೇಶಕ್ಕೆ ಮಾರಾಟ ಮಾಡಲಾಗಿದೆ ಎನ್ನಲಾಗಿತ್ತು. ಇದೀಗ ಈ ವಿಗ್ರಹವನ್ನು ಮರಳಿ ಭಾರತಕ್ಕೆ ಬಂದಿದೆ ಎಂದು ಮೋದಿ ಅವರು 'ಮನ್ ಕಿ ಬಾತ್'ನ 86 ನೇ ಸಂಚಿಕೆಯಲ್ಲಿ ತಿಳಿಸಿದ್ದಾರೆ. * ಕೆಲವು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿನ ಸುಮಾರು 600 ರಿಂದ 700 ವರ್ಷಗಳಷ್ಟು ಹಳೆಯದಾದ ಹನುಮಂತನ ವಿಗ್ರಹವನ್ನು ಕದ್ದು ಹೊರದೇಶಕ್ಕೆ ಮಾರಾಟ ಮಾಡಲಾಗಿತ್ತು. ಈ ವಿಗ್ರಹವನ್ನು ಕೂಡ ಆಸ್ಟ್ರೇಲಿಯಾ ದೇಶದಿಂದ ಮರಳಿ ತರಲಾಗಿದೆ ಎಂದಿದ್ದಾರೆ. * ಭಾರತದಲ್ಲಿನ ಪ್ರತಿಯೊಂದು ವಿಗ್ರಹಗಳಿಗೆ ಅದರದೇ ಆದ ಇತಿಹಾಸ ಹಾಗೂ ಆಯಾ ಕಾಲದ ಪ್ರಭಾವವನ್ನು ತೋರಿಸುತ್ತವೆ. ಅಷ್ಟೇ ಅಲ್ಲದೆ ಆ ವಿಗ್ರಹಗಳು ಭಾರತೀಯ ಶಿಲ್ಪಕಲೆಯನ್ನು ಜಗತ್ತಿಗೆ ತೋರಿಸುತ್ತಿವೆ ಎಂದು ತಿಳಿಸಿದ್ದಾರೆ. * ಇಲ್ಲಿಯವರೆಗೆ ಕದ್ದು ಮಾರಾಟ ಮಾಡಲಾಗಿರುವ ವಿಗ್ರಹಗಳನ್ನು ಭಾರತ ಮಾತೆಗೆ ಮರಳಿಸುವು ಜವಾಬ್ದಾರಿ ನಮ್ಮದಾಗಿದೆ, ಹಾಗೂ ಆ ಎಲ್ಲ ವಿಗ್ರಹಗಳು ಭಾರತೀಯ ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಮಹತ್ವವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. * ಭಾರತದಲ್ಲಿ 2013 ರವರೆಗೆ ಸರಿ ಸುಮಾರು 13 ವಿಗ್ರಹಗಳನ್ನು ಭಾರತಕ್ಕೆ ವಾಪಾಸ್ ತರಲಾಗಿದೆ. ಆದರೆ ಕಳೆದ '7' ವರ್ಷಗಳಲ್ಲಿ 200 ಕ್ಕೂ ಹೆಚ್ಚು ಅತ್ಯಮೂಲ್ಯ ವಿಗ್ರಹಗಳನ್ನು ಭಾರತ ದೇಶಕ್ಕೆ ಮರಳಿ ತರಲಾಗಿದೆ. ಈ ಎಲ್ಲ ವಿಗ್ರಹಗಳನ್ನು ಅಮೇರಿಕ, ಬ್ರಿಟನ್, ಹಾಲೆಂಡ್, ಫ್ರಾನ್ಸ್, ಕೆನಡಾ, ಜರ್ಮನಿ, ಸಿಂಗಪುರ ಇನ್ನು ಹೀಗೆ ಹಲವು ದೇಶಗಳಿಂದ ಮರಳಿ ತರಲಾಗಿದೆ ಎಂದಿದ್ದಾರೆ.