Job Description: * ಪ್ರಸ್ತುತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಜೊತೆ ಸಂಬಂಧವನ್ನು ಹೊಂದಿರುವ ವಿದೇಶಿ ಮೂಲದ ಪಂಜಾಬ್ ಪಾಲಿಟಿಕ್ಸ್ ಟಿವಿಯ ಎಲ್ಲಾ ಅಪ್ಲಿಕೇಶನ್, ಹಾಗೂ ವೆಬ್ಸೈಟ್ ಮತ್ತು ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡಲು ಅಧಿಕೃತ ಆದೇಶವನ್ನು ಹೊರಡಿಸಿದೆ. * ಇದೀಗ ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಆರಂಭಿಸುವ ವಿಧಾನಸಭಾ ಚುನಾವಣೆಗಳಲ್ಲಿ ಈ ಸೋಶಿಯಲ್ ಮೀಡಿಯಾ ಖಾತೆಗಳಿಂದ ಯಾವುದೇ ರೀತಿಯ ಶಾಂತಿ ಹದಗೆಡುವ ಕೆಲಸವಾಗಬಾರದೆಂದು ಈ ತೀರ್ಮಾನವನ್ನು ತಗೆದುಕೊಂಡಿದೆ. ಅಷ್ಟೇ ಅಲ್ಲದೇ ಗುಪ್ತಚರ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಮಾಹಿತಿ ತಂತ್ರಜ್ಞಾನ ನಿಯಮಗಳ ತುರ್ತು ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಂಜಾಬ್ ಪಾಲಿಟಿಕ್ಸ್ ಟಿವಿಯ ಡಿಜಿಟಲ್ ಮಾಧ್ಯಮಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಂತೆ ಆದೇಶವನ್ನು ಹೊರಡಿಸಿದೆ. * ಪ್ರಸ್ತುತ ದೇಶದಲ್ಲಿನ '5' ರಾಜ್ಯಗಳಲ್ಲಿ ಜರುಗುತ್ತಿರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದರಲ್ಲಿಯೂ ಪಂಜಾಬ್ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಪಂಜಾಬ್ ಪಾಲಿಟಿಕ್ಸ್ ಟಿವಿ ಆನ್ಲೈನ್ ಮಾಧ್ಯಮಗಳನ್ನು ಬಳಸಿಕೊಳ್ಳಲು ಯತ್ನಿಸುತಿತ್ತು ಎಂದು ಗುಪ್ತಚರ ಇಲಾಖೆಯು ವರದಿ ಮಾಡಿದೆ. * ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತ ಸರ್ಕಾರದ ಮಂತ್ರಿ ಮಟ್ಟದ ಏಜೆನ್ಸಿಯಾಗಿದೆ, ಈ ಸಚಿವಾಲಯವು ಮಾಹಿತಿ, ಪ್ರಸಾರ, ಪತ್ರಿಕಾ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ನಿಯಮಗಳು, ನಿಬಂಧನೆಗಳು ಮತ್ತು ಕಾನೂನುಗಳ ರಚನೆ ಮತ್ತು ಆಡಳಿತದ ಜವಾಬ್ದಾರಿಯನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಭಾರತ ಸರ್ಕಾರದ ಪ್ರಸಾರಾಂಗವಾದ ಪ್ರಸಾರ ಭಾರತಿಯ ಆಡಳಿತದ ಜವಾಬ್ದಾರಿಯನ್ನು ಕೂಡ ಈ ಸಚಿವಾಲಯ ಹೊಂದಿದೆ. * ಪ್ರಸ್ತುತ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಪ್ರಮುಖ ಶಾಸನಬದ್ಧ ಸಂಸ್ಥೆಯಾಗಿದೆ, ಹಾಗೂ ಇದು ಭಾರತದಲ್ಲಿ ಪ್ರಸಾರವಾಗುವ ಚಲನ ಚಿತ್ರಗಳ ನಿಯಂತ್ರಣಕ್ಕೆ ಬಹಳ ಮುಖ್ಯ ಕಾರಣವಾಗಿದೆ.