Job Description: * ಪ್ರಸ್ತುತ ಆಯುರ್ವೇದ ಹಾಗೂ ಗುಣಪಡಿಸುವ ಬೇರೆ ಬೇರೆ ಕ್ಷೇತ್ರದಲ್ಲಿ ಆವಿಷ್ಕಾರಗಳ ಬಗ್ಗೆ ಕೆಲಸವನ್ನು ಮಾಡುವ ನವೋದ್ಯಮ ಹಾಗೂ ವ್ಯಕ್ತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ "ಆಯುಷ್ ಸ್ಟಾರ್ಟ್ ಅಪ್ ಚಾಲೆಂಜ್"ನ್ನು ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಆರಂಭಿಸಿದೆ. * ಈ 'ಆಯುಷ್ ಸ್ಟಾರ್ಟ್ ಅಪ್ ಚಾಲೆಂಜ್'ನ ವಿಜೇತರಿಗೆ AIIA. ನಿಂದ ನಗದು ಬಹುಮಾನದ ಜೊತೆಗೆ ಇನ್ ಕ್ಯುಬೇಶನ್ ಬೆಂಬಲವನ್ನು ಪಡೆದುಕೊಳ್ಳಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ. * ಪ್ರಸ್ತುತ ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಸ್ಟಾರ್ಟ್ ಅಪ್ ಇಂಡಿಯಾ ಸಹಯೋಗದ ಜೊತೆಗೆ ಈ 'ಆಯುಷ್ ಸ್ಟಾರ್ಟ್ ಅಪ್ ಚಾಲೆಂಜ್' ಹಮ್ಮಿಕೊಂಡಿದೆ. ಸದ್ಯ ಆಯುಷ್ ಮಾರುಕಟ್ಟೆಯು ಸುಮಾರು $10 ಬಿಎನ್ ಎಂದು ಅಂದಾಜಿಸಿದ್ದಾರೆ, ಇನ್ನು ಮುಂಬರುವ ಮುಂದಿನ '5' ವರ್ಷಗಳ ಅವಧಿಯಲ್ಲಿ ಶೇ. 50 ರಷ್ಟು ಏರಿಕೆಯನ್ನು ಕಂಡುಕೊಳ್ಳಲಿದೆ ಎಂದು AIIA ಸಂಸ್ಥೆಯು ಮಾಹಿತಿಯನ್ನು ನೀಡಿದೆ. * ಪ್ರಸ್ತುತ AIIA ನ ನಿರ್ದೇಶಕ ಡಾ. ತನುಜಾ ಮನೋಜ್ ನೇಸಾರಿ ಅವರು ನೀಡಿರುವ ಮಾಹಿತಿಯ ಪ್ರಕಾರ ಆಯುಷ್ ಸಚಿವಾಲಯದ ಮಾರ್ಗದರ್ಶನದ ಅಡಿಯಲ್ಲಿ ವೈದ್ಯಕೀಯ ವಿಜ್ಞಾನದ '3' ಪ್ರಮುಖ ವಿಭಾಗಗಳನ್ನ ಒಂದೇ ವೇದಿಕೆಯ ಅಡಿಯಲ್ಲಿ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಹಾಗೂ ವೈದ್ಯಕೀಯ ಅಭ್ಯಾಸದ ಜೊತೆಗೆ ಒಂದು ಉತ್ತಮ ಸಂಸ್ಥೆಯಾಗಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಹೊಸ ಪರಿಹಾರಗಳನ್ನ ಅಭಿವೃದ್ಧಿ ಪಡಿಸಲು ನವೋದ್ಯಮಗಳು ಹೆಚ್ಚಿನ ಪಾತ್ರ ವಹಿಸಬಹುದಾಗಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಆಯುರ್ವೇದವು ಭಾರತೀಯ ಉಪಖಂಡದಲ್ಲಿ ಭಾರತೀಯ ಬೇರುಗಳನ್ನು ಹೊಂದಿರುವ ಪರ್ಯಾಯ ಔಷಧ ವ್ಯವಸ್ಥೆಯಾಗಿದೆ. ಇದನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಆಯುರ್ವೇದ ವೈದ್ಯರು ಈ ವೈದ್ಯಕೀಯವನ್ನು ಅಭ್ಯಾಸ ಮಾಡುತ್ತಾರೆ. ಪ್ರಸ್ತುತ ಆಯುರ್ವೇದವನ್ನು ಭಾರತಹಾಗೂ ನೇಪಾಳ ದೇಶಗಳಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಲಾಗುತ್ತಿದೆ, ಸರಿ ಸುಮಾರು 80% ಜನಸಂಖ್ಯೆಯು ಈ ಆಯುರ್ವೇದವನ್ನು ಬಳಕೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. *ವಿಶೇಷವಾಗಿ 1970 ರ ದಶಕದಲ್ಲಿ ಬಾಬಾ ಹರಿ ದಾಸ್ ಹಾಗೂ 1980 ರ ದಶಕದಲ್ಲಿ ಮಹರ್ಷಿ ಆಯುರ್ವೇದದಿಂದಾಗಿ, ಈ ಆಯುರ್ವೇದವು ಇತಿಹಾಸಪೂರ್ವ ಕಾಲದಲ್ಲಿ ಹುಟ್ಟಿಕೊಂಡಿದೆ ಎಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ.