Job Description: * ಇತ್ತೀಚಿಗೆ ಮಧ್ಯಪ್ರದೇಶ ಸರ್ಕಾರ ಜೈನ ಯಾತ್ರಾ ಕೇಂದ್ರ ಕುಂದಲ್‌ ಪುರದ ಎರಡು ಪಟ್ಟಣಗಳಲ್ಲಿ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಣೆ ಮಾಡಿದ್ದಾರೆ. * ಪ್ರಸ್ತುತ ಮಧ್ಯಪ್ರದೇಶ ರಾಜ್ಯದ ರಾಜಧಾನಿಯಾಗಿರುವ ಭೋಪಾಲ್‌ನಿಂದ ಸುಮಾರು 285 ಕಿ.ಮೀ. ದೂರದಲ್ಲಿರುವ ಕುಂದಲ್‌ ಪುರದಲ್ಲಿನ ಜೈನ ಸಮುದಾಯದ ಪಂಚಕಲ್ಯಾಣಕ್ ಮಹಾ ಮಹೋತ್ಸವದ ಸಮಾರಂಭದಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ್ ಜಿ ಮಹಾರಾಜ್ ಅವರ ಪ್ರೇರಣೆಯಿಂದಾಗಿ ದಾಮೋಹ್ ಜಿಲ್ಲೆಯಲ್ಲಿನ 'ಕುಂದಲ್‌ಪುರ ಹಾಗೂ ಬಂದಕ್‌ಪುರ' ಈ ಎರಡು ಪಟ್ಟಣಗಳು 'ಪವಿತ್ರ ಕ್ಷೇತ್ರ'ಗಳು ಎಂದು ಎಂದು ಘೋಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಎರಡು ಪಟ್ಟಣಗಳಲ್ಲಿ ಮಾಂಸ ಹಾಗೂ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಮಧ್ಯಪ್ರದೇಶ ರಾಜ್ಯದ ದಾಮೋಹ್ ಜಿಲ್ಲೆಯಲ್ಲಿನ 'ಬಂದಕ್‌ ಪುರ' ಪಟ್ಟಣವು ಶಿವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇದೀಗ ಅಲ್ಲಿನ ರಾಜ್ಯ ಸರ್ಕಾರವು ವಿದ್ಯಾಸಾಗರ ಮಹಾರಾಜ್ ಅವರ ಆಶಯದಂತೆ ಒಂದು ವರ್ಷದೊಳಗೆ ಹಿಂದಿಯಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್ ಅಧ್ಯಯನಗಳನ್ನು ಆರಂಭಿಸಲಿದೆ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಇದರ ಜೊತೆಗೆ ಗೋಸಂರಕ್ಷಣೆಯ ಕಾರ್ಯಗಳಿಗೆ ನಾಗರಿಕರು ಮುಂದಾಗುವದರ ಜೊತೆಗೆ ಉತ್ತಮ ಪರಿಸರಕ್ಕಾಗಿ ಗಿಡಗಳನ್ನು ಬೆಳಸಬೇಕು ಎಂದು ಕೊರೊಕೊಂಡಿದ್ದಾರೆ. * ಪ್ರಸ್ತುತ ಮಧ್ಯಪ್ರದೇಶ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ ಮಧ್ಯಪ್ರದೇಶ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿಂದಿಯಲ್ಲಿ MBBS ಕೋರ್ಸ್ ನ್ನು ಆರಂಭಿಸಲಿದೆ ಎಂದು ತಿಳಿಸಿದ್ದಾರೆ. * ಬಂದಕ್ ಪುರ್ ಭಾರತದ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಈ ಬಂದಕ್ ಪುರ್ ಪಟ್ಟಣವು ಶಿವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ, ಅದುವೇ ಜಾಗೇಶ್ವರನಾಥ ದೇವಾಲಯ ಇದರ ಮುಖ್ಯ ಗರ್ಭಗುಡಿಯಲ್ಲಿ ಶಿವ-ಲಿಂಗ ಇರುವ ಮುಖ್ಯ ದೇವಾಲಯವಿದೆ. * ಮಧ್ಯಪ್ರದೇಶದ ದಮೋಹ್ - ಬಂದಕ್‌ಪುರ ಜಿಲ್ಲೆಯಲ್ಲಿರುವ ಶಿವನ ದೇವಾಲಯವನ್ನು ಜಾಗೇಶ್ವರನಾಥ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಹಳೆಯ ದೇವಾಲಯವಾಗಿದೆ. ಹಾಗೂ ಶಿವನ ಮುಂದೆ ಪಾರ್ವತಿ ದೇವಿಯ ದೇವಾಲಯವಿದೆ.