Job Description: * ಇತ್ತೀಚಿಗೆ ಬ್ರಿಟನ್‌ನಲ್ಲಿ ಮೊದಲ ಬಾರಿ '3' ಜನರಲ್ಲಿ ಲಸ್ಸಾ ಜ್ವರ ಕಾಣಿಸಿಕೊಂಡಿದೆ, ಅವರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ, ಈ ವ್ಯಕ್ತಿಯು ಲಂಡನ್‌ನ ಉತ್ತರದ ಬೆಡ್‌ಫೋರ್ಡ್‌ಶೈರ್‌ನಲ್ಲಿರುವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎಂದು ಬ್ರಿಟನಿನ ಆರೋಗ್ಯ ಪ್ರಾಧಿಕಾರವು ತಿಳಿಸಿದೆ. ಈ ಸೋಂಕು ತಗುಲಿದವರು ಪೂರ್ವ ಇಂಗ್ಲೆಂಡ್‌ನ ಒಂದೇ ಕುಟುಂಬದ ವ್ಯಕ್ತಿಗಳಾಗಿದ್ದಾರೆ. * ಪ್ರಸ್ತುತ ಈ ಲಸ್ಸಾ ಜ್ವರ ಎನ್ನುವದು ತೀವ್ರವಾದ ವೈರಲ್ ಹೆಮರಾಜಿಕ್ ಕಾಯಿಲೆಯಾಗಿದೆ, ಇದು ಎಬೋಲಾ ಹಾಗೂ ಮಾರ್ಬರ್ಗ್ ವೈರಸ್‌ಗಳ ಜಾತಿಗೆ ಸೇರಿ ಕೊಂಡಿದೆ. ಆದರೆ ಅಷ್ಟೊಂದು ಆಪಾಯಕಾರಿಯಾಗಿಲ್ಲ. ಈ ಹಿಂದೆ 1969 ರಲ್ಲಿ ಉತ್ತರ ನೈಜೀರಿಯಾದಲ್ಲಿ ಕಾಣಿಸಿಕೊಂಡ ರೋಗವನ್ನು ಲಸ್ಸಾ ಜ್ವರ ಎಂದು ಪರಿಗಣಿಸಲಾಗಿದೆ. * ಇದೀಗ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ನೀಡಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಬ್ರಿಟನ್‌ನಲ್ಲಿ '3' ಜನರಿಗೆ ಈ ಲಸ್ಸಾ ಜ್ವರ ತಗುಲಿದೆ, ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಒಬ್ಬರು ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. * ಇತ್ತೀಚಿಗಷ್ಟೇ ನೈಜೀರಿಯಾದ ಆರೋಗ್ಯ ಪ್ರಾಧಿಕಾರವು ಈ ಲಸ್ಸಾ ಜ್ವರ ರೋಗದ ಹರಡುವಿಕೆ ಹೆಚ್ಚಾಗುತ್ತಿದೆ ಎಂದು ಹೇಳಿಕೆ ನೀಡಿತ್ತು. ಈ ರೋಗದ ಹರಡುವಿಕೆಯು ಬೇಸಿಗೆ ಕಾಲದಲ್ಲಿ ಹೆಚ್ಚಾಗಲಿದೆ ಎಂದು ತಿಳಿಸಿದೆ. ಪ್ರಾಥಮಿಕವಾಗಿ ಈ ರೋಗವು ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್, ಲೈಬೀರಿಯಾ, ಗಿನಿಯಾ ಹಾಗೂ ನೈಜೀರಿಯಾ ದೇಶಗಳಲ್ಲಿ ಪತ್ತೆಯಾಗಿದೆ. * * ಲಸ್ಸಾ ಜ್ವರ - ಉಂಟುಮಾಡುವ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಕಂಡುಬಂದಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪೊಲ್ಯೂಷನ್ ತಿಳಿಸಿದೆ. ಈ ರೋಗವನ್ನು ಮೊದಲ ಬಾರಿ 1969 ರಲ್ಲಿ ನೈಜೀರಿಯಾದ ಲಸ್ಸಾದಲ್ಲಿ ಕಂಡು ಹಿಡಿಯಲಾಗಿದೆ. ಸಾಮಾನ್ಯವಾಗಿ ಈ ಲಸ್ಸಾ ಜ್ವರವು ಇಲಿಗಳಿಂದ ಹರಡುತ್ತದೆ. ನೈಜೀರಿಯಾದಲ್ಲಿ ಇತ್ತೀಚಿಗಿನ ಎರಡು ತಿಂಗಳಿನಲ್ಲಿ ಈ ಲಸ್ಸಾ ಜ್ವರದಿಂದಾಗಿ 48 ಜನರು ಪ್ರಾಣ ಕಳೆದುಕೊಂಡಿದ್ದಾರೆ. * * ಲಸ್ಸಾ ಜ್ವರದ ಲಕ್ಷಣಗಳು : ಜ್ವರ, ಆಯಾಸ, ದೌರ್ಬಲ್ಯ ಮತ್ತು ತಲೆನೋವು, ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖದ ಊತ, ಎದೆ ನೋವು, ಬೆನ್ನು ಮತ್ತು ಹೊಟ್ಟೆ ನೋವುಗಳಾಗಿವೆ.