Job Description: * ಪ್ರಸ್ತುತ ರವಿದಾಸ್ ಜಯಂತಿ ಹಿನ್ನಲೆಯಿಂದಾಗಿ ದೆಹಲಿಯಲ್ಲಿನ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. * ಸಂತ ರವಿದಾಸ್ 15 ರಿಂದ 16 ನೇ ಶತಮಾನದಲ್ಲಿ ಭಕ್ತಿ ಚಳುವಳಿಗೆ ಸೇರಿದವರಾಗಿದ್ದಾರೆ, ಹಾಗೂ ಇವರ ಸ್ತೋತ್ರಗಳನ್ನು ಗುರು ಗ್ರಂಥ ಸಾಹಿಬ್'ನಲ್ಲಿ ಸೇರ್ಪಡೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಂತ ರವಿದಾಸ್'ರನ್ನು 21 ನೇ ಶತಮಾನದ ರವಿದಾಸ್ಸಿಯಾ ಧರ್ಮದ ಸ್ಥಾಪಕ ಎಂದು ಗುರುತಿಸಲಾಗಿದೆ. * ಪ್ರಸ್ತುತ ರವಿದಾಸ್ ಜಯಂತಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದ ಹುಣ್ಣಿಮೆಯ ದಿನವಾದ ಮಾಘ್ ಪೂರ್ಣಿಮಿಯ ದಿನದಂದು ಆಚರಣೆ ಮಾಡಲಾಗುತ್ತದೆ. ಸಂತ ಗುರು ರವಿದಾಸ್ ಅವರು ಜಾತೀಯತೆ ಹಾಗೂ ಅಸ್ಪೃಶ್ಯತೆಯಂತಹ ದುಷ್ಟ ಪದ್ಧತಿಗಳನ್ನು ತಗೆದು ಹಾಕಲು ತಮ್ಮ ಜೀವನವನ್ನು ಮುಡಿಪಾಗಿಟ್ಟದ್ದರು. * ಗುರು ರವಿದಾಸ್ ಜಯಂತಿಯು ಗುರು ರವಿದಾಸ್ ಅವರ ಜನ್ಮದಿನವಾಗಿದೆ. ಹಾಗೂ ಇದೊಂದು ರವಿದಾಸ್ಸಿಯಾ ಧರ್ಮದ ವಾರ್ಷಿಕ ಕೇಂದ್ರಬಿಂದುವಾಗಿದೆ. ಈ ಜಯಂತಿಯನ್ನು ಆಚರಿಸಲು ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇತ್ತೀಚಿಗೆ ಈ ಜಯಂತಿಯ 2020 ರ ಫೆಬ್ರವರಿ. 9 ರಂದು ಆಚರಿಸಲಾಗಿದೆ. ಜಾತೀಯತೆಯ ವಿರುದ್ಧದ ಅನೇಕ ಕಾರ್ಯಗಳನ್ನು ನಿರ್ವಹಿಸಿದ್ದಾರೆ, ಈ ಹಿನ್ನಲೆಯಿಂದಾಗಿ ಇವರನ್ನು ಆಧ್ಯಾತ್ಮಿಕ ವ್ಯಕ್ತಿ ಹಾಗೂ ಸಮಾಜ ಸುಧಾರಕ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ ಇವರು ಸಂತ ಕಬೀರನಿಗೆ ಸಮವಾಗಿದ್ದಾರೆ. * ರವಿದಾಸ್ ಜಯಂತಿಯು ಅವರ ಜನ್ಮವನ್ನು ಸೂಚಿಸುತ್ತದೆ. ಇವರು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಹಾಗೂ ಇವರು ಭಕ್ತಿ ಚಳುವಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ, ಹಾಗೂ ಕಬೀರ್ ಅವರ ಶಿಷ್ಯರಾಗಿ ಗುರುತಿಸಿಕೊಂಡಿದ್ದಾರೆ. ರವಿದಾಸ್ ಅವರನ್ನು ಹಲವು ಕಬೀರಪಂಥಿಗಳು, ಸಿಖ್ಖರು ಇವರನ್ನು ಗುರುಗಳಂತೆ ಪೂಜಿಸುತ್ತಾರೆ.