Job Description: * ಪ್ರಸ್ತುತ ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕರಾಗಿದ್ದ ಬಪ್ಪಿ ಲಹಿರಿ ಅವರು ತಮ್ಮ 69ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಹಿಂದೆ 1970-80 ರ ದಶಕದಲ್ಲಿ ಬಪ್ಪಿ ಲಹಿರಿ ಅವರು ಅನೇಕ ಚಿತ್ರಗಳಿಗೆ ಹಾಡುಗಳನ್ನು ನೀಡಿದ್ದಾರೆ. ಅವುಗಳಲ್ಲಿ ಚಲ್ತೆ ಚಲ್ತೆ, ಡಿಸ್ಕೋ ಡಾನ್ಸರ್ ಮತ್ತು ಶರಾಬಿ ಮುಖ್ಯವಾದ ಹಾಡುಗಳಾಗಿವೆ. ಬಪ್ಪಿ ಲಹಿರಿ ಅವರು 2020 ರಲ್ಲಿ ತೆರೆ ಕಂಡ ಬಾಘಿ 3 ಚಿತ್ರದ ಭಂಕಾಸ್ ಶೀರ್ಷಿಕೆಯ ಹಾಡು ಲಹಿರಿ ಅವರ ಕೊನೆಯ ಹಾಡಾಗಿದೆ. * ಅಲೋಕೇಶ್ ಲಾಹಿರಿ ಇವರನ್ನು ಜನಪ್ರಿಯವಾಗಿ ಬಪ್ಪಿ ಲಾಹಿರಿ ಎಂದು ಕರೆಯುತ್ತಿದ್ದರು. ಇವರು ಭಾರತೀಯ ಗಾಯಕ, ಸಂಯೋಜಕ ಹಾಗೂ ಧ್ವನಿಮುದ್ರಣ ನಿರ್ಮಾಪಕ. ಇವರು ಅನೇಕ ಭಾರತೀಯ ಚಿತ್ರರಂಗದಲ್ಲಿ ಸಂಶ್ಲೇಷಿತ ಡಿಸ್ಕೋ ಸಂಗೀತದ ಬಳಕೆಯನ್ನು ಜನಪ್ರಿಯಗೊಳಿಸಿದ್ದರು, ಇವರು ಅಮರ್ ಸಂಗೀ, ಅಮರ್ ಪ್ರೇಮ್, ಆಶಾ ಓ ಭಲೋಬಾಷಾ, ರಕ್ತಲೇಖಾ, ಅಮರ್ ತುಮಿ, ಮಂದಿರಾ, ಬದ್ನಾಮ್, ಪ್ರಿಯಾ ಇನ್ನು ಅನೇಕ ಬಂಗಾಳಿ ಚಲನಚಿತ್ರಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಹಾಗೂ 1980 ಮತ್ತು 1990 ರ ದಶಕಗಳಲ್ಲಿ ಡಿಸ್ಕೋ ಡ್ಯಾನ್ಸರ್, ನಮಕ್ ಹಲಾಲ್, ನಯಾ ಕದಮ್, ಮಾಸ್ಟರ್‌ಜಿ, ಡ್ಯಾನ್ಸ್ ಡ್ಯಾನ್ಸ್, ಕಮಾಂಡೋ, ಚಿತ್ರಗಳ ಮೂಲಕ ಫಿಲ್ಮಿ ಸೌಂಡ್‌ಟ್ರ್ಯಾಕ್‌ ನ ಜೊತೆಗೆ ಜನಪ್ರಿಯತೆಯನ್ನು ಗಳಿಸಿದ್ದರು. * ಈ ಹಿಂದೆ 2014 ರಲ್ಲಿ ಬಪ್ಪಿ ಲಾಹಿರಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದರು. ಅದೇ ವರ್ಷದಲ್ಲಿ ಭಾರತೀಯ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಶ್ರೀರಾಂಪುರದ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿದ್ದರು, ಆದರೆ ಆ ಚುನಾವಣೆಯಲ್ಲಿ ಅವರು ಸೋಲನ್ನು ಕಂಡರು. * ಬಪ್ಪಿ ಲಾಹಿರಿ ಅವರು ಡಿಸ್ಕೋ-ಶೈಲಿಯ ಹಾಡುಗಳಿಗೆ ಜನಪ್ರಿಯವಾಗಿದ್ದರು, ಹಾಗೂ ಭಾರತೀಯ ಸಂಗೀತದ ಆರ್ಕೆಸ್ಟ್ರೇಶನ್ ಹಾಗೂ ಸಮ್ಮಿಳನವನ್ನು ಅಂತರರಾಷ್ಟ್ರೀಯ ಧ್ವನಿಗಳ ಜೊತೆಗೆ ಯುವ ಲವಲವಿಕೆಯ ಲಯಗಳ ಜೊತೆ ತಂದರು. ಚಲ್ತೇ ಚಲ್ತೆ ಮತ್ತು ಜಖ್ಮೀಯಂತಹ ಚಲನಚಿತ್ರಗಳ ಹಾಡುಗಳು ಇವರ ಯಸ್ಸಸಿಗೆ ಪ್ರಮುಖ ಕಾರಣವಾದವು. * ಬಪ್ಪಿ ಲಾಹಿರಿ ಅವರು ಇದೇ 2022 ರ ಫೆಬ್ರವರಿ.15 ರಂದು ಮುಂಬೈನ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಾಗೂ ಅನೇಕ ಹಿಂದಿ ಚಿತ್ರದ ನಟರು ಸಂತಾಪ ಸೂಚಿಸಿದ್ದಾರೆ.