Job Description: * ಕನ್ನಡ ಸಾಹಿತಿ, ಕವಿ, ನಾಡೋಜ ಚೆನ್ನವೀರ ಕಣವಿಯವರು ಅವರು ನಿಧನರಾಗಿದ್ದಾರೆ. ಇವರು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂತಾಪವನ್ನು ಸೂಚಿಸಿದ್ದಾರೆ. * ಈ ಚನ್ನವೀರ ಕಣವಿ ಅವರು ದಶಕಗಳಿಂದ ಕನ್ನಡದ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. 'ಶ್ರೀ ಚೆನ್ನವೀರ ಕಣವಿಯವರ ಉತ್ಕೃಷ್ಟ ಕಾವ್ಯ ಹಾಗೂ ಬರಹಗಳು ಅದೆಷ್ಟೋ ಕಾಲಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. * ನಾಡೋಜ ಚೆನ್ನವೀರ ಕಣವಿ ಅವರು ಈ ಹಿಂದೆ 1928 ರ ಜೂನ್. 28 ರಂದು ಜನಿಸಿದ್ದರು. ಹಾಗಿ ಇತ್ತೀಚಿಗೆ 2022 ರ ಫೆಬ್ರವರಿ. 16 ರಂದು ನಿಧನರಾಗಿದ್ದಾರೆ. ಇವರು ಕನ್ನಡ ಭಾಷೆಯ ಪ್ರಮುಖ ಕವಿ ಹಾಗೂ ಬರಹಗಾರರಾಗಿದ್ದರು, ಈ ಹಿಂದೆ 1981 ರಲ್ಲಿ ಅವರ ಜೀವ ಧ್ವನಿ ಕೃತಿಗಾಗಿ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅಷ್ಟೇ ಅಲ್ಲದೇ ಇವರು 'ಸಮನ್ವಯದ ಕವಿ' ಹಾಗೂ 'ಸೌಜನ್ಯದ ಕವಿ'ಯಾಗಿ ಪ್ರಸಿದ್ದಿಯನ್ನು ಪಡೆದಿದ್ದರು. ಮತ್ತೇ 2011 ರಲ್ಲಿ ಕಣವಿ ಅವರಿಗೆ ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿಯನ್ನು ನೀಡಿ ಗೌರವವನ್ನು ಸಮರ್ಪಿಸಲಾಗಿತ್ತು. * ಕಣವಿಯವರು ತಮ್ಮ ಶಾಲಾ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಅಭ್ಯಸಿಸಿದ್ದರು. ಇದಾದ ಬಳಿಕ 1956 ರಿಂದ 1983 ರವರೆಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.