Job Description: * ಪ್ರಸ್ತುತ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ 150ಎ(NH-150A)ನ ಹಿರಿಯೂರು-ಹುಲಿಯಾರ್ ವಿಭಾಗದ 2 ಪಥಗಳ ರಸ್ತೆಯ ಅಗಲೀಕರಣಕ್ಕೆ ಸುಮಾರು 139.88 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ. * ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಈ ಕಾರ್ಯಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. * * ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) : ಇದೊಂದು ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ, ಈ ಸಂಸ್ಥೆಯನ್ನು ಈ ಹಿಂದೆ 1995 ರಲ್ಲಿ ಸ್ಥಾಪನೆ ಮಾಡಲಾಗಿದೆ. ಪ್ರಸ್ತುತ ಈ ಸಂಸ್ಥೆಯು 1980 ಕಿಮೀ ಅಧಿಕ ನೆಟ್‌ವರ್ಕ್‌ನ ಕಾಯಿದೆಯ ಜವಾಬ್ದಾರಿಯನ್ನು ಹೊಂದಿದೆ. ಹಾಗು ಇದೊಂದು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವಾಲಯದ ನೋಡಲ್ ಏಜೆನ್ಸಿಯಾಗಿದೆ. ಅಷ್ಟೇ ಅಲ್ಲದೇ ಹೆದ್ದಾರಿಗಳ ಉಪಗ್ರಹ ಮ್ಯಾಪಿಂಗ್‌ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೆ NHAI ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. * ಈ ಹಿಂದೆ NHAI ಅನ್ನು 1988 ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯಿದೆಯ ಮೂಲಕ ಘೋಷಣೆ ಮಾಡಲಾಗಿದೆ. ಈ ಕಾಯಿದೆ ಅನ್ವಯ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಯಾವುದೇ ಇತರ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ ಅವುಗಳನ್ನು ನಿರ್ವಹಿಸಲಾಗುತ್ತದೆ. ಈ ಸಂಸ್ಥೆ ಈ ಕಾರ್ಯವನ್ನು ಭಾರತ ಸರ್ಕಾರವು ವಹಿಸಿಕೊಟ್ಟಿದೆ. ಈ ಹಿಂದೆ NHAI 1995 ರ ಫೆಬ್ರವರಿ. 10 ರಂದು ಕಾರ್ಯಾಚರಣೆಗೆ ಬಂದಿದೆ. ಹಾಗೂ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ NHAI ಅನೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆಯ ಜವಾಬ್ದಾರಿಯನ್ನು ಪಡೆದುಕೊಂಡಿದೆ. * ಈ ಹಿಂದೆ 1988 ರಲ್ಲಿ ಯೋಗೇಂದ್ರ ನರೇನ್ ಅವರು NHAI ನ ಮೊದಲ ಅಧ್ಯಕ್ಷರಾಗಿದ್ದರು, ಇವರು ಉತ್ತರ ಪ್ರದೇಶ ರಾಜ್ಯದಲ್ಲಿನ ಕೇಡರ್‌ ನ ನಿವೃತ್ತ IAS ಅಧಿಕಾರಿ.