Job Description: * ವಿಶ್ವ ಆರೋಗ್ಯ ಸಂಸ್ಥೆ (WHO) ತಂಬಾಕು ಸೇವನೆಯನ್ನು ತಡೆಯಲು ಕ್ವಿಟ್ ಟೊಬ್ಯಾಕೊ ಆಯಪ್ ಅಪ್ಲಿಕೇಶನ್ ನ್ನು ಆರಂಭಿಸಿದೆ. ಈ ಅಪ್ಲಿಕೇಶನ್ ಮೂಲಕ ಜನರು ಸಿಗರೇಟ್ ಚಟವನ್ನು ಬಿಡಿಸಲು ಹಾಗೂ ಇತರ ಹೊಸ ಉತ್ಪನ್ನಗಳಲ್ಲಿನ ತಂಬಾಕು ಬಳಕೆಯನ್ನು ನಿಲ್ಲಿಸಲು ಸಹಾಯ ಮಾಡಲಿದೆ. * ಪ್ರಸ್ತುತ ಜಗತ್ತಿನಲ್ಲಿ ತಂಬಾಕಿನಿಂದಾಗಿ ಪ್ರತಿ ವರ್ಷ 8 ಮಿಲಿಯನ್ ಜನರು ಮೃತರಾಗುತ್ತಿದ್ದಾರೆ, ಇದೀಗ ತಂಬಾಕನ್ನು ತ್ಯಜಿಸಲು ಜನರಿಗೆ ಬೆಂಬಲವನ್ನು ನೀಡಲು ಈ ಅಪ್ಲಿಕೇಶನ್‌ ಸಹಾಯ ಮಾಡಲಿದೆ. ಇದೀಗ ತಂಬಾಕು ತ್ಯಜಿಸಲು ವಿನ್ಯಾಸಗೊಳಿಸಿರುವ ಈ ಅಪ್ಲಿಕೇಶನ್'ನ್ನು WHO ಆಗ್ನೇಯ ಏಷ್ಯಾ ವಲಯದ ನಿರ್ದೇಶಕಿಯಾಗಿರುವ 'ಪೂನಂ ಖೇತ್ರಪಾಲ್ ಸಿಂಗ್' ಅವರು ಆರಂಭಿಸಲಿದ್ದಾರೆ. ಇದೀಗ ತಂಬಾಕು ತ್ಯಜಿಸಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ ಎಂದಿದ್ದಾರೆ. * ಪ್ರಸ್ತುತ ಆಗ್ನೇಯ ಏಷ್ಯಾ ಪ್ರದೇಶದಲ್ಲಿ 1.6 ಮಿಲಿಯನ್ ಜನರು ತಂಬಾಕು ಸೇವನೆ ಮಾಡುತ್ತಾರೆ ಎಂದು WHO ಮಾಹಿತಿ ನೀಡಿದೆ. * ಆಗ್ನೇಯ ಏಷ್ಯಾ ಪ್ರದೇಶವು 2000-2025 ರ ಅವಧಿಯಲ್ಲಿ ತಂಬಾಕು ಬಳಕೆಯಲ್ಲಿ ತೀವ್ರ ಕುಸಿತವನ್ನು ಕಂಡಿದೆ ಎಂದು WHO ಜಾಗತಿಕ ವರದಿಯನ್ನು ನೀಡಿದೆ. ಆದರೆ ಇನ್ನು 432 ಮಿಲಿಯನ್ ಜನರು ತಂಬಾಕು ಬಳಕೆ ಮಾಡುವದನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಈ ಪ್ರದೇಶವು ಜಾಗತಿಕವಾಗಿ 355 ಮಿಲಿಯನ್‌ ಜನರಲ್ಲಿ 266 ಮಿಲಿಯನ್ ಜನರನ್ನು ಹೊಗೆರಹಿತ ತಂಬಾಕು ಬಳಕೆದಾರರನ್ನು ಒಳಗೊಂಡಿದೆ. * ಇದೀಗ ತಂಬಾಕು ಬಳಕೆ ಹಾಗೂ ತಂಬಾಕು ನಿಯಂತ್ರಣ ನೀತಿಗಳ ಮೇಲ್ವಿಚಾರಣೆ ಮಾಡಲು ಈ ಪ್ರದೇಶವು ತಂಬಾಕು ಕಣ್ಗಾವಲುಗಳನ್ನು ವಿಸ್ತರಿಸಿದೆ. ಪ್ರಸ್ತುತ ಥೈಲ್ಯಾಂಡ್ ದೇಶವು ಸರಳ ಪ್ಯಾಕೇಜಿಂಗ್'ನ್ನು ಅಳವಡಿಸಿರುವ ಏಷ್ಯಾದ ಮೊದಲ ದೇಶವಾಗಿ ಹೊರ ಹೊಮ್ಮಿದೆ. * ತಂಬಾಕು ಎಂಬುದು ನಿಕೋಟಿಯಾನಾ ಕುಲದ ಹಲವಾರು ಸಸ್ಯಗಳ ಸಾಮಾನ್ಯ ಹೆಸರಾಗಿದೆ. 70 ಕ್ಕೂ ಅಧಿಕ ಜಾತಿಯ ತಂಬಾಕುಗಳಿವೆ, ಅದರಲ್ಲಿ ಮುಖ್ಯ ವಾಣಿಜ್ಯ ಬೆಳೆ N. ಟ್ಯಾಬಾಕಮ್ ಆಗಿದೆ. ಪ್ರಸ್ತುತ ಒಣಗಿದ ತಂಬಾಕು ಎಲೆಗಳನ್ನು ಮುಖ್ಯವಾಗಿ ಸಿಗರೇಟ್ ಹಾಗೂ ಸಿಗಾರಗಳಲ್ಲಿ ಧೂಮಪಾನ ಮಾಡಲು ಬಳಕೆ ಮಾಡಲಾಗುತ್ತದೆ. * ತಂಬಾಕು ಹೆಚ್ಚು ವ್ಯಸನಕಾರಿ ಉತ್ತೇಜಕ ಆಲ್ಕಲಾಯ್ಡ್ ನಿಕೋಟಿನ್ ಹಾಗೂ ಹರ್ಮಲಾ ಆಲ್ಕಲಾಯ್ಡ್‌ಗಳನ್ನು ಹೊಂದಿದೆ. ತಂಬಾಕು ಸೇವನೆಯು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಿದೆ, ಅದರಲ್ಲಿಯೂ ವಿಶೇಷವಾಗಿ ಹೃದಯ, ಯಕೃತ್ತು ಹಾಗೂ ಶ್ವಾಸಕೋಶದ ಮೇಲೆ ಪರಿಣಾಮವನ್ನು ಬೀರುವ ಅನೇಕ ಕ್ಯಾನ್ಸರ್‌ಗಳು. WHO ಈ ಹಿಂದೆ 2008 ರಲ್ಲಿ ತಂಬಾಕು ಸೇವನೆಯನ್ನು ತಡೆಗಟ್ಟಬಹುದಾದ ಸಾವಿನ ಕಾರಣವೆಂದು ಹೆಸರಿಸಿದೆ.