Job Description: * ಹಿರಿಯ ಗಾಯಕಿ ಎಂದು ಪ್ರಖ್ಯಾತಿ ಪಡೆದಿರುವ ಸಂಧ್ಯಾ ಮುಖರ್ಜಿ ಅವರು ಹೃದಯಾಘಾತದಿಂದಾಗಿ ತಮ್ಮ 90 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇವರನ್ನು ಸಂಧ್ಯಾ ಮುಖೋಪಾಧ್ಯಾಯ ಎಂದು ಕರೆಯುವ ಗಾಯನ ದಂತಕಥೆ ಸಂಧ್ಯಾ ಮುಖರ್ಜಿ ಅವರಾಗಿದ್ದಾರೆ. * ಇತ್ತೀಚಿಗೆ ಸಂಧ್ಯಾ ಮುಖರ್ಜಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಬೇಡವೆಂದು ತಿರಸ್ಕರಿಸಿದ್ದರು, ಇದಾದ ಬಳಿಕ ಅವರು ಬಹಳ ಸುದ್ದಿಯಲ್ಲಿದ್ದರು. * ಸಂಧ್ಯಾ ಮುಖರ್ಜಿ ಅವರು ಭಾರತೀಯ ಹಿನ್ನೆಲೆ ಗಾಯಕಿ ಹಾಗೂ ಸಂಗೀತಗಾರ್ತಿ, ಬಂಗಾಳಿ ಸಂಗೀತದಲ್ಲಿ ಪರಿಣತಿ ಪಡೆದಿದ್ದರು. ಈ ಹಿಂದೆ 2011 ರಲ್ಲಿ ಭಾರತದ ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರಿಕ ಗೌರವವಾದ ಬಂಗಾ ಬಿಭೂಷಣವನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ 1970 ರಲ್ಲಿ ಜಯ ಜಯಂತಿ ಹಾಗೂ ನಿಶಿ ಪದ್ಮಾ ಚಿತ್ರಗಳಲ್ಲಿನ ಇವರು ಹಾಡಿರುವ ಹಾಡುಗಳಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. * ಮತ್ತೇ ಇವರು 1950 ರಲ್ಲಿ ತಾರಾಣಾ ಚಿತ್ರದಲ್ಲಿ ಒಂದು ಹಾಡನ್ನು ಹಾಡುವ ಮೂಲಕ ಹಿಂದಿ ಹಾಡುಗಳನ್ನು ಹಾಡಲು ಮುಂಬೈನಲ್ಲಿ ತಮ್ಮ ಜೀವನವನ್ನು ಆರಂಭಿಸಿದರು. ಇವರು 17 ಹಿಂದಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದರು. ವೈಯಕ್ತಿಕ ಕಾರಣವನ್ನು ತಿಳಿಸಿ 1952 ರಲ್ಲಿ ತಮ್ಮ ನಗರ ಕೋಲ್ಕತ್ತಾಗೆ ಮರಳಿದರು. * ಸಂಧ್ಯಾ ಮುಖರ್ಜಿ ಅವರು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂಧರ್ಭದಲ್ಲಿ ಹೋರಾಟದಿಂದ ಪಾರಾಗಲು ಕೋಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದ ಲಕ್ಷಾಂತರ ನಿರಾಶ್ರಿತರಿಗೆ ಹಣವನ್ನು ಸಂಗ್ರಹಿಸಲು ಹಾಗೂ ಬಾಂಗ್ಲಾದೇಶದ ಕಾರಣಕ್ಕಾಗಿ ಜಾಗತಿಕ ಜಾಗೃತಿ ಮೂಡಿಸಲು ಭಾರತೀಯ ಬಂಗಾಳಿ ಕಲಾವಿದರಲ್ಲಿ ಸಾಮೂಹಿಕ ಚಳುವಳಿಯಲ್ಲಿ ಭಾಗಿಯಾದರು. ಮುಖರ್ಜಿ ಅವರು ಬಾಂಗ್ಲಾದೇಶದ ಸಂಗೀತಗಾರರಾಗಿದ್ದ ಸಮರ್ ದಾಸ್ ಅವರಿಗೆ ಸ್ವಾಧಿನ್ ಬಾಂಗ್ಲಾ ಬೇಟಾರ್ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದರು. * ಮುಖರ್ಜಿ ಅವರ ಸಂಗೀತದಲ್ಲಿನ ಅಭಿನಯಕ್ಕಾಗಿ 2022 ಜನವರಿ. 26 ರ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಇವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು.